ಒಲವಿನ ಓದುಗರಿಗೆ ದಸರಾ ಹಬ್ಬದ ಶುಭಾಶಯಗಳು -ಮಲ್ಲಿಕಾರ್ಜುನ ಮುದನೂರ್
3ತಿಂಗಳಲ್ಲಿ ನಿಮ್ಮ ವಿನಯವಾಣಿ ಓದುಗರ ಸಂಖ್ಯೆ 1ಲಕ್ಷ 40ಸಾವಿರ ದಾಟಿದೆ. ಇದೇ ಪ್ರೀತಿ ಮುಂದುವರೆಯಲಿ…
ಕಳೆದ ಮೂರು ತಿಂಗಳುಗಳಿಂದ ವಿನಯವಾಣಿ ಆನ್ ಲೈನ್ ಪತ್ರಿಕೆಯ ಪ್ರತಿ ವರದಿ ಮತ್ತು ಬರಹಗಳನ್ನು ಓದಿ ಬೆನ್ನುತಟ್ಟುತ್ತಿರುವ ಒಲವಿನ ಓದುಗರಿಗೆಲ್ಲಾ ದಸರಾ ಹಬ್ಬದ ಶುಭಾಶಯಗಳು. ನಿಮ್ಮೆಲ್ಲರ ಸಹಕಾರದ ಫಲವಾಗಿ ನಿಮ್ಮ ವಿನಯವಾಣಿ ವೀಕ್ಷಕರ ಸಂಖ್ಯೆ ಈಗ 1ಲಕ್ಷ 40 ಸಾವಿರದ ಗಡಿ ದಾಟಿದೆ. ಅಲ್ಪ ಸಮಯದಲ್ಲೇ ಅಧಿಕ ಓದುಗರನ್ನು ರೀಚ್ ಆಗಿದ್ದು ನಮ್ಮ ವಿನಯವಾಣಿ ಬಳಗದ ಭಾಗ್ಯವೇ ಸರಿ.

ನಾಡಿನ ಶ್ರೇಷ್ಠ ಕವಿ, ನಾಡೋಜ ಪ್ರೊ. ಕೆ.ಎಸ್ .ನಿಸಾರ್ ಅಹಮದ್ ಅವರು ಸೇರಿದಂತೆ ನ್ಯಾಯಾಧೀಶರು, ಮಠಾಧೀಶರು, ಸಾಹಿತಿಗಳು, ಮೇಷ್ಟ್ರು, ವೈದ್ಯರು, ವಕೀಲರು, ಪೊಲೀಸ್ ಅಧಿಕಾರಿಗಳು, ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ರೈತ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು. ಪ್ರೀತಿಯ ಗೆಳೆಯರು ಅಪಾರ ಸಂಖ್ಯೆಯಲ್ಲಿ ವಿನಯವಾಣಿ ವೆಬ್ ಸೈಟ್ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ, ವಿನಯವಾಣಿ ಬಳಗಕ್ಕೆ ಆನೆಬಲ ಬಂದಂತಾಗಿದೆ. ಈ ಪ್ರೀತಿ, ವಿಶ್ವಾಸ ಮುಂದುವರೆಯಲಿ… ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನೆಂದೂ ಚ್ಯುತಿ ತರೋದಿಲ್ಲ ಎಂಬ ಭಾಷೆ ನೀಡುತ್ತಾ ಮತ್ತೊಮ್ಮೆ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು…
ಬನ್ನಿ ಹಂಚಿಕೊಂಡು ಬಂಗಾರದಂತೆ ಬಾಳೋಣ….
-ಮಲ್ಲಿಕಾರ್ಜುನ ಮುದನೂರ್
ಸಂಪಾದಕರು
ವಿನಯವಾಣಿ ಆನ್ ಲೈನ್ ಪತ್ರಿಕೆ
ಅಭಿನಂದನೆಗಳು ಸರ್. ವಿನಯವಾಣಿ ನಾಡಿನ ಸಾರಸ್ವತ ಲೋಕಕ್ಕೆ ವಿಶಿಷ್ಟ ಕಾಣಿಕೆ ಆಗಲಿ ಸರ್
ನೀವು ಬಳಗದ ಪ್ರಮುಖರು ಸರ್..
ಮುಂದಿನ
ವಿಜಯದಶಮಿಗೆ ವಿನಯವಾಣಿ ಓದುಗರ ಸಂಖ್ಯೆ ಹತ್ತುಪಟ್ಟು ಹೆಚ್ಚಾಗಲಿ ಎಂದು ಹಾರೈಸುವೆ ಆರ್.ಎಸ್.ತಳವಾರ.
ತುಂಬಾ ಧನ್ಯವಾದಗಳು ಸರ್ ಸಹಕಾರವಿರಲಿ..
ಈ ನಿಮ್ಮ ವಿನಯವಾಣಿ ಆನ್ ಲೈನ್ ಪತ್ರಿಕೆ ಇನ್ನು ಎತ್ತರಕ್ಕೆ ಬೆಳೆಯಲ್ಲಿ.ಓದುಗರ ಸಂಖ್ಯೆ ಇನ್ನು ಜಾಸ್ತಿಯಾಗಲ್ಲಿ ಎಂದು ಹಾರೈಸುತ್ತೇನೆ ಅಣ್ಣ..
ಧನ್ಯವಾದಗಳು ಇದು ನಿಮ್ಮ ವಿನಯವಾಣಿ ಸಹೋದರ..
ಧನ್ಯವಾದಗಳು ಇದು ನಿಮ್ಮ ವಿನಯವಾಣಿ ಸಹೋದರ..
All the best brother
Congrats Sir we are with you
Thank u maamuji..