ಪ್ರಮುಖ ಸುದ್ದಿಬಸವಭಕ್ತಿ

ಸಮಾಜಕ್ಕೆ ಬೆಳಕು ನೀಡಿದ ಮಹ್ಮದ ಪೈಗಂಬರ

ಈದ್ ಮಿಲಾದ್‍ಃ ಮದೀನಾ ಭಾವಚಿತ್ರ ಭವ್ಯ ಮೆರವಣಿಗೆ

ಯಾದಗಿರಿ, ಶಹಾಪುರ: ಮುಸ್ಲೀಂ ಸಮಾಜಕ್ಕೆ ಬೆಳಕು ನೀಡಿದವರು ಪ್ರವಾದಿ ಮಹ್ಮದ್ ಪೈಗಂಬರರು. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪೈಗಂಬರರ ತತ್ವಾದರ್ಶಗಳು ದಾರಿ ದೀಪವಾಗಿವೆ. ಅವರ ಸಂದೇಶ ಎಲ್ಲಾ ಕಾಲಕ್ಕೂ, ಸರ್ವ ಪ್ರದೇಶಗಳಿಗೂ ಅನುಕರಣೆಗೆ ಯೋಗ್ಯವಾಗಿದೆ ಎಂದು ಮುಸ್ಲಿಂ ಮುಖಂಡ ರಫೀಕ್ ಕೆಬಿಎನ್ ತಿಳಿಸಿದರು.

ಪ್ರವಾದಿ ಮಹ್ಮದ್ ಪೈಗಂಬರ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಸೀರತ್ ಕಮಿಟಿ ಹಾಗೂ ಸರ್ವ ಮುಸ್ಲಿಂ ಬಂಧುಗಳು ಆಯೋಜಿಸಿದ್ದ ( ಮಹ್ಮದ್ ಪೈಗಂಬರ) ಮದೀನಾ ಭಾವಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅವರು, ವಿನಯವಾಣಿಯೊಂದಿಗೆ ಮಾತನಾಡಿ ಅಭಿಪ್ರಾಯ ಹಂಚಿಕೊಂಡರು.

ಮಹ್ಮದ್ ಪೈಗಂಬರರು ಸರ್ವರ ಹೃದಯಲ್ಲಿ ನೆಲೆಸಿದ್ದಾರೆ. ಅವರ ಆದರ್ಶವನ್ನು ನಾವೆಲ್ಲ ಪಾಲಿಸಬೇಕಿದೆ. ದೈವ ವಾಣಿಯಂತೆ ಅವರು ನೀಡಿದ ಸಂದೇಶ ಬಹು ಮಹತ್ವ ಪಡೆದುಕೊಂಡಿವೆ ಎಂದರು.

ನಗರದ ದಿಗ್ಗಿಬೇಸ್ ದೊಡ್ಡ ಮಸೀದಿಯಿಂದ ಹೊರಟ ನಗರದ ಪ್ರಮುಖ ಬೀದಿಗಳ ಮೂಲಕ ಸಂಭ್ರಮದಿಂದ ಜರುಗಿತು. ಆಸರ್ ಮೊಹಲ್ಲಾದವರೆಗೂ ಮೆರವಣಿಗೆ ನಡೆಯಿತು. ಮೆರವಣಿಗೆ ಯಲ್ಲಿ ಸಣ್ಣ ಮಕ್ಕಳ ವೇಷಭೂಷಣ ಗಮನಸೆಳೆಯಿತು. ಮೆರವಣಿಗೆಯಲ್ಲಿ ಯುವ ಸಮೂಹ ಡಿಜೆ ಸೌಂಡ್‍ಗೆ ನೃತ್ಯ ಮಾಡಿ ಸಂಭ್ರಮಿಸಿದರು.

ದಾರಿಯುದ್ದಕ್ಕೂ ಶರಬತ್, ನೀರಿನ ವ್ಯವಸ್ಥೆ ಮಾಡಲಾಗಿತ್ತು. ನಗರದ ಬಹುತೇಕ ಮಸೀದಿಗಳ ಮುಂಭಾಗದಲ್ಲಿ ರಸ್ತೆಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ಕಳೆ ಕಟ್ಟಿತ್ತು. ಮೆರವಣಿಗೆಯಲ್ಲಿ ಕುದುರೆ ಒಂಟೆಗಳು ಮೆರಗು ನೀಡಿದವು.
ಈ ಸಂದರ್ಭದಲ್ಲಿ ಸೀರತ್ ಕಮಿಟಿ ಅಧ್ಯಕ್ಷ ರಫೀಕ್ ಚೌದ್ರಿ, ಮಾಜಿ ನಗರಸಭೆ ಅಧ್ಯಕ್ಷ ಎಸ್.ಎನ್.ಖಾದಿ. ಮುಸ್ತಾಫಾ ಮೆಕ್ಕಾ, ಮುಸ್ತಫಾ ದರ್ಬಾನ್, ಸಯ್ಯದ್ ಖಾದ್ರಿ, ಆವದ್ ಚಾವುಶ್, ಶಕೀಲ್ ಮುಲ್ಲಾ, ನುಮಾನ್ ಖಾಜಿ, ಪಾಶಾ ಪಟೇಲ್, ಜಾಫರ್ ದಾದುಲ್ಲಾ, ಎಸ್‍ಡಿಪಿಐ ಖಾಲಿದ್, ಸಲೀಂ, ಸಿರಾಜ್  ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

One Comment

Leave a Reply

Your email address will not be published. Required fields are marked *

Back to top button