ಪ್ರಮುಖ ಸುದ್ದಿ
ನೇಣು ಬಿಗಿದ ಸ್ಥಿತಿಯಲ್ಲಿ ಶವಪತ್ತೆ, ಕೊಲೆ ಶಂಕೆ , ಪತಿ & ಪುತ್ರನ ವಿರುದ್ಧ ಕೊಲೆ ಆರೋಪ
ಯಾದಗಿರಿಃ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಕಾರಣಕ್ಕೆ ಗಂಡ ಮತ್ತು ಆಕೆಯ ಮಗ ಇಬ್ಬರು ಸೇರಿ ಗಂಗಮ್ಮ ಎಂಬಾಕೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಸಂಜೆ ಯಾರು ಇಲ್ಲದ ವೇಳೆ ಮನೆಯಲ್ಲಿ ತಂದೆ ಮತ್ತು ಮಗ ಸೇರಿ ಪತ್ನಿ ಗಂಗಮ್ಮಳನ್ನು ಬ್ಲೌಸ್ ಪೀಸ್ ಬಟ್ಟೆಯಿಂದ ನೇಣು ಬಿಗಿದು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಗ ಶರಣಪ್ಪ (25) ಮತ್ತು ಗಂಡ ನಾಗಪ್ಪ (60)ನಿಂದ ಗಂಗಮ್ಮಳ ಕೊಲೆ ನಡೆದಿದೆ ಎನ್ನಲಾಗಿದೆ.
ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಎಂದು ಹೇಳಲಾಗುತ್ತಿದೆ. ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.