ಕಾವ್ಯ
‘ಆತ್ಮವಿಶ್ವಾಸ’ ವೇ ಸೂಕ್ಷ್ಮ ಅಹಂಕಾರಕ್ಕೆ ಕಾರಣವಾ..? ಮುದನೂರ ರಚಿಸಿದ ಕವಿತೆ
ಆತ್ಮವಿಶ್ವಾಸ-ಸೂಕ್ಷ್ಮ ಅಹಂಕಾರ
ಸರ್ವರಿಗೂ ಸಹಾಯ
ಮಾಡುವ ನಿಸ್ವಾರ್ಥಿಯ
ಸ್ನೇಹಜೀವಿ ನಾನು.
ಸ್ವತ; ಕಷ್ಟ ಎದುರಿಸಬೇಕಾದ
ಪ್ರಸಂಗ ಬಂದಾಗ
ಜೊತೆಗೆ ಇದ್ದವರು
ಸಹಾಯ ಪಡೆದವರು
ಯಾರು ನಿಲ್ಲಲಿಲ್ಲ.
ಆಗ ಜೊತೆಗಿದದ್ದು,
ಆತ್ಮ ವಿಶ್ವಾಸ
ಒಂದೇ..
ಅದುವೆ ಬದುಕಿನಲ್ಲಿ
ಸೂಕ್ಷ್ಮ ಅಹಂಕಾರವನ್ನುಂಟು
ಮಾಡಿರಬಹುದಾ..?
