ಪ್ರಮುಖ ಸುದ್ದಿ
ಹೊಸ ವರ್ಷ ಆಚರಣೆಗೆ ಬ್ರೇಕ್..! ಮೋಜು, ಮಸ್ತಿ, ಪಾರ್ಟಿ ಬಂದ್.!
ಹೊಸ ವರ್ಷ ಆಚರಣೆಗೆ ಬ್ರೇಕ್..! ಮೋಜು, ಮಸ್ತಿ, ಪಾರ್ಟಿ ಬಂದ್.!
ಬೆಂಗಳೂರಃ ಹೊಸ ವರ್ಷ ಸಂಭ್ರಮ ಆಚರಣೆ ಹೆಸರಲ್ಲಿ ಮೋಜು, ಮಸ್ತಿ, ಪಾರ್ಟಿಗೆ ಸರ್ಕಾರ 11 ರೂಲ್ಸ್ ಪಾಲಿಸುವಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸುವ ಮೂಲಕ ಕೊರೊನಾ ಮಹಾಮಾರಿ ತಡೆಗೆ ಸಮರ್ಪಕ ಕ್ರಮ ತೆಗೆದುಕೊಂಡಿದೆ.
ಈ ಮೊದಲಿನಂತೆ ಹೊಸ ವರ್ಷಕ್ಕೆ ಜನಸಂದಣಿ ಸೇರುವಂತಿಲ್ಲ ಮತ್ತು ಬಾರ್ ಆಂಡ್ ರೆಸ್ಟೋರೆಂಟ್ ಹಾಗು ಪಬ್ ಗಳಲ್ಲಿ ಸಾಮಾಜಿಕ ಅಂತರ, ಸ್ನಾನಿಟೈಸ್ ಸೇರಿದಂತೆ ಟೋಕನ್ ಸಿಸ್ಟಮ್ ವ್ಯವಸ್ಥೆ ಕೈಗೊಳ್ಳಲು ಸೂಚನೆ ನೀಡಿದೆ.
ಅಲ್ಲದೆ ಎಲ್ಲೆಂದರಲ್ಲಿ ಮೋಜು, ಮಸ್ತಿ ಪಾರ್ಟಿಗೆ ಮಾಡುವಂತಿಲ್ಲ. ಅದೆಕ್ಕೆಲ್ಲ ಬ್ರೇಕ್ ಹಾಕಲಾಗಿದೆ. ಕೊರೊನಾ ತಡೆಗೆ 11 ರೂಲ್ಸ್ ಹೊರಡಿಸಿದ್ದು ಅದನ್ನು ಪಾಲಿಸುವಂತೆ ಖಡಕ್ ಎಚ್ಚರಿಕೆಯನ್ನು ಸರ್ಕಾರ ನೀಡಿದೆ ಎನ್ನಲಾಗಿದೆ.