ಸರ್ಕಾರದ ಜನ ವೀರೋಧಿ ನೀತಿಗೆ ಸಾಮಾನ್ಯರು ತತ್ತರ-ಕೆ.ನೀಲಾ
ನಾಗನಟಗಿಯಲ್ಲಿ ಮಹಿಳಾ ಸಮಾವೇಶ
ಯಾದಗಿರಿ, ಶಹಾಪುರಃ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸರ್ಕಾರ ಜನ ವಿರೋಧ ನೀತಿ ಜಾರಿಗೊಳಿಸುತ್ತಿದೆ. ಇಂತಹ ಅನೀತಿಗೆ ಜನ ತತ್ತರಿಸಿ ಹೋಗಿದ್ದಾರೆ ಎಂದು ಹೋರಾಟಗಾರ್ತಿ ಕೆ.ನೀಲಾ ಅವರು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ನಾಗನಟಗಿ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೀವ್ರ ಬರಗಾಲ ಸುಡುತ್ತಿರುವ ಬಿಸಿಲನ್ನು ಗಣನೆಗೆ ತೆಗೆದುಕೊಳ್ಳದೆ ಮಹಿಳಾ ಸಮಾಜ ಸರ್ವರಲ್ಲಿ ಸಮಪಾಲುದಾರಳಾಗಿ ಕ್ರೀಯಾ ಶೀಲತೆಗಳೊಂದಿಗೆ ಪ್ರತಿಯೊಂದು ರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದಾರೆ. ದೇಶದಲ್ಲಿ ಮಹಿಳೆಯರ ಸೇವೆ ಅತ್ಯಗತ್ಯವಾಗಿದ್ದರೂ ಉತ್ತುಂಗದ ಮೇರು ಪರ್ವತಡಿಯಲ್ಲಿ ಕೀರ್ತಿ ಶಿಖರವಾಗಿದ್ದಾರೆ. ಅವರ ಮಹತ್ವದ ಸಾಧನೆಗಳು ಇಂದು ಭಾರತದ ದೇಶಕ್ಕೆ ಮಾದರಿಯಾಗಿವೆ.
ಆದರೆ ಇಂತಹ ಮಹಿಳಾ ಸಮಾಜಕ್ಕೆ ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಸುರಕ್ಷತೆ ಸುಭದ್ರತೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗದಿರುವದು ಸೋಜಿಗವಾಗಿದೆ. ಇಂದಿಗೂ ಎಷ್ಟೋ ತಾಯಂದಿರು ಉಸಿರು ಬಿಗಿ ಹಿಡಿದು ನಿತ್ಯ ಕರ್ತವ್ಯ ನಿಭಾಯಿಸಿ ಜೀವ ಹಿಡಿದು ಮನೆಗೆ ತಲುಪುವಂತಾಗಿದೆ. ಅವರಿಗೂ ಸ್ವಚ್ಛಂದ ಬದುಕು ಬೇಕಾಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಉತ್ತಮ ವಾತಾವರಣ ರೂಪಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಿಸಿದ ಮಹಿಳೆಯರಿಗೆ ಸನ್ಮಾನಿಸಲಾಯಿತು. ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿದ ನಿಂಗಮ್ಮ ಸೈದಾಪುರ, ಉದ್ಯೋಗ ಖಾತರಿಯಲ್ಲಿ ನೂರು ದಿನ ಕೆಲಸ ಮಾಡಿದ ಸಿದ್ದಮ್ಮ ಹಳ್ಳಿ, ಸಜ್ಜೆ ತೆನೆ ಕೊಯ್ದು ರಾಶಿ ಮಾಡಿದ ಭೀಮವ್ವ ನಾಯ್ಕೋಡಿ, 200 ಕೆಜಿ ಹತ್ತಿ ಬಿಡಿಸಿದ ಅಲ್ಲಮ್ಮ ರಾಜಾಪುರ, ಎಎಸ್ಐ ಕರ್ತವ್ಯನಿರತ ಮಹಿಳೆ ಹೇಮಾವತಿ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಸಮಾರಂಭಕ್ಕೂ ಮುನ್ನಾ ಗ್ರಾಮದ ದರ್ಗಾದಿಂದ ಗ್ರಾಮ ಪಂಚಾಯತ ಕಾರ್ಯಾಲಯದ ವರೆಗೆ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕ.ಪ್ರಾಂ.ಕೃ.ಕೂ.ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ಮುಖಂಡರಾದ ಚಂದ್ರಪ್ಪ ಹೊಸಕೇರಾ, ಜಿಲ್ಲಾಧ್ಯಕ್ಷ ದಾವಲಸಾಬ ನದಾಫ್, ಸೂರಯ್ಯಾ ಬೇಗಂ, ಮಲ್ಲಮ್ಮ ಕೊಡ್ಲಿ, ಶ್ರೀಮಂತ ಬಿರೆದಾರ, ಕರೆಪ್ಪ ಅಚ್ಚಳಿ. ಮಲ್ಲಯ್ಯ ಪೋಲಂಪಲ್ಲಿ, ನಿಂಗಣ್ಣ ತಿಪ್ಪನಳ್ಳಿ, ಜಿಂದಾವಲಿ, ಗುಲಾಮಸಾಬ ನಾಗನಟಗಿ, ಚಂದ್ರು ಕಾಡಂಗೇರಾ, ಸವಿತಾ ಪೂಜಾರಿ, ಹಣಮಂತ್ರಾಯ ಟೋಕಾಪುರ, ಕಮಲಮ್ಮ, ಭೀಮರಾಯ, ಪಂಪಣ್ಣ, ಸಂಗಪ್ಪ, ಬಸಲಿಂಗಪ್ಪ ಉಪಸ್ಥಿತರಿದ್ದರು. ಶಬಾನಾ ನದಾಫ ಸ್ವಾಗತಿಸಿಮ ನಿರೂಪಿಸಿದರು. ರಂಗಮ್ಮ ವಂದಿಸಿದರು.