ಪ್ರಮುಖ ಸುದ್ದಿ
ಶಹಾಪುರಃ SPL ಕ್ರಿಕೆಟ್ ಟೂರ್ನಾಮೆಂಟ್ ಮುಂದೂಡಿಕೆ
ಕೊರೊನಾ ವೈರಸ್ ಎಫೆಕ್ಟ್ಃ ಸರ್ಕಾರದ ಆದೇಶ ಪಾಲನೆ
ಶಹಾಪುರಃ ಇದೇ ಮಾ.15 ರಂದು ನಗರದ ಹೊರವಲಯದ ಡಿಗ್ರಿ ಕಾಲೇಜು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಬೇಕಿದ್ದ ಶಹಾಪುರ ಪ್ರಿಮಿಯರ್ ಲೀಗ್ (ಎಸ್ ಪಿಎಲ್ ಕ್ರಿಕೆಟ್ ಟೂರ್ನಾಮೆಂಟ್) ಕೊರಾನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ಸುರಕ್ಷತಾ ಕ್ರಮದ ಆದೇಶದನ್ವಯ, ಅನಿರ್ಧಿಷ್ಟಾವಧಿ ಮುಂದೂಡಲಾಗಿದೆ ಎಂದು ಕಾರ್ಯಕ್ರಮದ ರೂವಾರಿ ಎಂಸಿಸಿ ಗ್ರೂಪ್ ಮುಖ್ಯಸ್ಥ ಮೌನೇಶ ನಾಟೇಕಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಗರನಾಡಿನ ಹಿರಿಯ ಧುರೀಣ ದಿ.ಬಾಪುಗೌಡ ದರ್ಶನಾಪುರ ಸ್ಮರಣಾರ್ಥ ಕ್ರಿಡಾಕೂಟವನ್ನು ಮುಂದೂಡಲಾಗಿದೆ. ಮುಂದಿನ ಸರ್ಕಾರದ ಆದೇಶ ನೋಡಿಕೊಂಡು ಟೂರ್ನಾಮೆಂಟ್ ಆಯೋಜಿಸಲಾಗುವದು ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಟೂರ್ನಾಮೆಂಡ್ ನಲ್ಲಿ ಭಾಗವಹಿಸಲು ತಯ್ಯಾರಿಯಲ್ಲಿದ್ದ ಎಲ್ಲಾ ತಂಡಗಳು ಸಹಕರಿಸಬೇಕೆಂದು ಅವರು ಕೋರಿದ್ದಾರೆ.