ಕಥೆ

“ಅಹಂಕಾರಿ ರಾಜ‌” ಈ ನೀತಿ ಕಥೆ ಓದಿ

ಅಹಂಕಾರಿ ರಾಜ

ಅವನೊಬ್ಬ ಗರ್ವಿ ಮಹಾರಾಜ. ಆತನಿಗೆ ಎಲ್ಲರೂ ತನ್ನನ್ನು ಹೊಗಳಲೇಬೇಕೆಂದು ಹೆಬ್ಬಯಕೆ ಇತ್ತು . ಒಮ್ಮೆ ಜಾತ್ರೆಯ ದಿನ . ಜನರ ಮಧ್ಯೆ ರಾಜ ಬಂದ. ಎಲ್ಲರೂ ಸುತ್ತಿ ಬಿಟ್ಟರು. ಆಗ ಕೊಳೆಬಟ್ಟೆ ತೊಟ್ಟಿದ್ದ ಕುರುಚಲುಗಡ್ಡದ ವ್ಯಕ್ತಿಯೊಬ್ಬ ರಾಜನನ್ನು ಕಂಡು ಉದ್ಧಟತನದಿಂದ ನಗಲಾರಂಭಿಸಿದ.

ತಕ್ಷಣವೇ ಆ ಮಂತ್ರಿಗೆ ಸಿಟ್ಟು ಬಂದು ‘ ಎಲವೋ ಮೂರ್ಖ, ತಲೆತಗ್ಗಿಸಿ ನಮಸ್ಕಾರ ಮಾಡು ಎಂದು ಗರ್ಜಿಸಿದ.

ಆಗ ಆ ವ್ಯಕ್ತಿ ನೇರವಾಗಿ ರಾಜನೆದುರು ಹೋಗಿ ರಾಜನ ಕಾಲುಗಳನ್ನು ನೋಡುತ್ತಾ’ ನಿಮ್ಮ ಚಪ್ಪಲಿಗಳಿಗೆ ನಮಸ್ಕಾರ, ನಿಮ್ಮ ಅಂಗಿಗೆ ನಮಸ್ಕಾರ, ನಿಮ್ಮ ಹಾರಕ್ಕೆ ನಮಸ್ಕಾರ , ನಿಮ್ಮ ಕಿರೀಟಕ್ಕೆ ನಮಸ್ಕಾರ , ಆದ್ರೆ … ನಿಮಗೆ ಈ ! ‘ ಎಂದು ಉಗಿದೇ ಬಿಟ್ಟನು.

ರಾಜ ಸಿಟ್ಟಿನಿಂದ ಹೇಳಿದ – ‘ ಈ ನೀಚನನ್ನು ಜೈಲಿಗೆ ಹಾಕಿ ‘ ಎಂದು . ಮಾರನೇ ದಿನ ಆತನನ್ನು ರಾಜನೆದುರು ತಂದಾಗ ‘ ಇವನನ್ನು ಗಲ್ಲಿಗೇರಿಸಿ ‘ ಎಂದೇ ಬಿಟ್ಟ . ಆಗ ಆ ವ್ಯಕ್ತಿ ‘ ನನ್ನ ಅಪರಾಧವೇನು ?’

ಆಗ ಮಂತ್ರಿ ನೀನು ರಾಜನ ಚಪ್ಪಲಿಗೆ ನಮಿಸಿ ರಾಜನಿಗೆ ಉಗಿದಿರುವೆ ‘ ಎಂದ . ‘ ಇದನ್ನು ನಾನೇ ರುಜುವಾತು ಮಾಡಿ ತೋರಿಸುವೆ ‘ .

ಆ ವ್ಯಕ್ತಿ ರಾಜನಿಗೆ ಕೊಳಕು ಬಟ್ಟೆ ತೊಡಿಸಿದ . ರಾಜನ ಕೂದಲುಗಳಿಗೆ ಧೂಳು ಹಚ್ಚಿ ತಲೆಕೆದರಿದ. ರಾಜನನ್ನು ನಗರದ ಮಧ್ಯೆ ಚೌಕದಲ್ಲಿ ಕೂರಿಸಿದ ಅಲ್ಲಿ ಹೋಗುವ ಎಲ್ಲರ ಬಳಿ ‘ ಇಲ್ಲಿ ರಾಜನಿದ್ದಾನೆ ನಮಿಸಿ ಹೋಗಿ ‘ ಎಂದ.

ಆಗ ಜನರೆಲ್ಲ ನಿನಗೇನು ಹುಚ್ಚಾ ? ಇವನು ರಾಜನಾ … ಛೀ … ಹೂ … ‘ ಎಂದೇ ಮುಖ ಮುರಿದು ಹೋಗುತ್ತಿದ್ದರು .

ಇಡೀ ದಿನವಾದರೂ ಒಬ್ಬರೂ ನಮಿಸಲಿಲ್ಲ . ಆಗಲೇ ಮಂತ್ರಿ ಹೇಳುತ್ತಾನೆ – ‘ ನಿಮಗಲ್ಲ ನಿಜಕ್ಕೂ ಗೌರವ , ಈ ಹಾರಕ್ಕೆ , ಚಪ್ಪಲಿ ಹಾಗೂ ಕಿರೀಟಕ್ಕೆ ! ನಿಮ್ಮ ಸ್ಥಾನಕ್ಕೆ ಮತ್ಯಾದೆ ಇಲ್ಲವೇ ಇಲ್ಲ … ‘ ಈ ಸತ್ಯ ಅರಿತಾಗ ರಾಜ ಮುಖ, ತಲೆ ತಗ್ಗಿಸಿಬಿಟ್ಟನು.

ನೀತಿ – ಸರಳತೆಗೆ ಗೌರವ, ಅಹಂವಿಕೆಗೆ ಅಲ್ಲ.

ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

One Comment

  1. ನಿಮ್ಮ ಪ್ರತಿಯೊಂದು ಕಥೆಗಳಲ್ಲಿನ ನೀತಿಗಳು ಜನರು ಅಳವಡಿಸಿಕೊಂಡರೆ ಜೀವನ ಸುಂದರ ಗುರೂಜಿ.

Leave a Reply

Your email address will not be published. Required fields are marked *

Back to top button