ಪ್ರಮುಖ ಸುದ್ದಿ
ಶಹಾಪುರಃ ರಸ್ತೆ ಅಪಘಾತ ಓರ್ವನ ಸಾವು, ಇನ್ನೋರ್ವ ತೀವ್ರ ಗಾಯ
ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ
ಶಹಾಪುರಃ ರಸ್ತೆ ಅಪಘಾತ ಓರ್ವನ ಸಾವು, ಇನ್ನೋರ್ವ ತೀವ್ರ ಗಾಯ
ಶಹಾಪುರಃ ಇನ್ನೋವಾ ಕಾರೊಂದು ಟಿವಿಎಸ್ ಎಕ್ಸಲ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲಿಯೆ ಮೃತ ಪಟ್ಟಿದ್ದು, ಇನ್ನೋರ್ವ ತೀವ್ರ ಗಾಯಗೊಂಡ ಘಟನೆ ತಾಲೂಕಿನ ಗೋಗಿ ಮಾರ್ಗದಲ್ಲಿ ಮಂಜಿತ್ ಹತ್ತಿ ಮಿಲ್ ಸಮೀಪ ನಡೆದಿದೆ ಎಂದು ತಿಳಿದು ಬಂದಿದೆ.
ಬಂದಯ್ಯಗೌಡ ತಂದೆ ಶಂಕರಗೌಡ (18) ಅಪಘಾತದಲ್ಲಿ ಮೃತಪಟ್ಟಿದ್ದು, ರುದ್ರು ತಂದೆ ಈರಣ್ಣ ಅಳ್ಳಳಿ (19) ತೀವ್ರ ಗಾಯಗೊಂಡಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದ್ವಿಚಕ್ರ ವಾಹನ ಸವಾರರು, ತಾಲೂಕಿನ ಮದ್ರಿಕಿ ಗ್ರಾಮ ನಿವಾಸಿಗಳೆಂದು ತಿಳಿದು ಬಂದಿದ್ದು, ಗೋಗಿ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.