ಯಾದಗಿರಿಃ 49 ಪಾಸಿಟಿವ್, 9-ಶಹಾಪುರ ಸಾರಿಗೆ ಸಿಬ್ಬಂದಿ, 1 ಗೋಗಿ, 1 ಮಡ್ನಾಳ ಕ್ಯಾಂಪ್
ಯಾದಗಿರಿಃ 49 ಪಾಸಿಟಿವ್, 9-ಶಹಾಪುರ ಸಾರಿಗೆ ಸಿಬ್ಬಂದಿ, 1 ಗೋಗಿ, 1 ಮಡ್ನಾಳ ಕ್ಯಾಂಪ್
ಯಾದಗಿರಿಃ ಜಿಲ್ಲೆಯಲ್ಲಿ ಇಂದು ಮತ್ತೆ 49 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಶಹಾಪುರ ಸಾರಿಗೆ ಸಿಬ್ಬಂದಿಯ 9 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಅಲ್ಲದೆ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಸುಪರ್ ಟೇಲರ್ ಹತ್ತಿರ 1 ಪ್ರಕರಣ ಇನ್ನೊಂದು ಮಡ್ನಾಳ ಕ್ಯಾಂಪ್ ನಲ್ಲಿ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಇನ್ನುಳಿದವುಗಳು ಯಾದಗಿರಿ ಸಂಚಾರಿ ಪೊಲೀಸ್ ಠಾಣೆ, ಗ್ರಾಮೀಣ ಠಾಣೆ ಸಿಬ್ಬಂದಿ ಸೇರಿದಂತೆ ಹುಣಸಿಗಿ, ವಡಿಗೇರ ಮತ್ತು ಯಾದಗಿರಿ ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ.
ಅನ್ಯ ರಾಜ್ಯಗಳಿಂದ ಬಂದ ಕೆಲವರಿಗೆ ಕೊರೊನಾ ಪಾಸಿಟಿವ್ ಇದ್ರೆ ಪೊಲೀಸರು ಮತ್ತು ಸಾರಿಗೆ ಇಲಾಖೆ ಸಿಬ್ಬಂದಿಗೆ ತಗುಲಿದ ಕೊರೊನಾ ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ಹೀಗಾಗಿ ಜಿಲ್ಲೆ ಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತಿದ್ದು, ನಾಗರಿಕರಲ್ಲಿ ಆತಂಕ ಹೆಚ್ಚಾಗಿದೆ.
ಕೊರೊನಾ ತಡೆಗೆ ಜಿಲ್ಲಾಡಳಿತ ಒಂದು ವಾರ ಲಾಕ್ಡೌನ್ ಜಾರಿಗೊಳಿಸಿದ್ದು, ಜನರು ಸಮರ್ಪಕವಾಗಿ ಸ್ಪಂಧಿಸಿದಾಗ ನಿಯಮಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಿದಾಗ ಮಾತ್ರ ಇದು ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ.