ಪ್ರಮುಖ ಸುದ್ದಿ
ಬಿ.ಎಸ್.ಯಡಿಯೂರಪ್ಪ ಅವರೇ ಈಗ ಬಿಜೆಪಿಗೆ ಬಾಸ್ ಅಂತೆ!
ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಪೂರ್ಣ ಅಧಿಕಾರ ನೀಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಲೋಕಸಭೆ ಚುನವಣಾ ಟಿಕೆಟ್ ಹಂಚಿಕೆ, ಸಂಘಟನೆ ಹಾಗೂ ಪ್ರಚಾರದಲ್ಲಿ ಬಿ.ಎಸ್.ವೈಗೆ ಪೂರ್ಣ ಅಧಿಕಾರ ನೀಡುವುದು. ಆ ಮೂಲಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವುದು ಬಿಜೆಪಿ ತಂತ್ರಗಾರಿಕೆ ಆಗಿದೆ ಎಂದು ತಿಳಿದು ಬಂದಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿ.ಎಸ್.ವೈ ಅವರನ್ನು ಸಿಎಂ ಅಬ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಪೂರ್ಣ ಅಧಿಕಾರ ಮಾತ್ರ ಹೈಕಮಾಂಡ್ ಹತೋಟಿಯಲ್ಲೇ ಇತ್ತು. ಹೀಗಾಗಿ, ರಾಜ್ಯ ನಾಯಕತ್ವದ ಕೊರತೆಯಿಂದಾಗಿಯೇ ಹಿನ್ನೆಡೆ ಆಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹೈಕಮಾಂಡ ಎಚ್ಚೆತ್ತುಕೊಂಡಿದೆ ಎನ್ನಲಾಗಿದೆ.