ಪ್ರಮುಖ ಸುದ್ದಿ
ಶಹಾಪುರಃ ತುಂತುರು ಮಳೆ ಮಧ್ಯೆ ಧ್ವಜಾರೋಹಣ
ತುಂತುರು ಮಳೆಯಲ್ಲಿಯೇ ಕಕ ಉತ್ಸವ ಆಚರಣೆ
ಯಾದಗಿರಿಃ ಜಿಲ್ಲಾದ್ಯಂತ ಮೂರು ದಿನಗಳಿಂದ ಸತತ ಮಳೆಯಾಟ ಮುಂದುವರೆದಿದ್ದು, ಇಂದು ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಮಳೆ ಮಧ್ಯೆಯೇ ಶಾಲಾ ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ನಗರದ ಹಳೆಪೇಟೆಯ ಜ್ಞಾನ ಗಂಗೋತ್ರಿ ಹಿರಿಯ ಪ್ರಾಥಾಮಿಕ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಕರು, ಮಕ್ಕಳು ಮಳೆ ನಡುವೆಯೇ ಛತ್ರಿ ಹಿಡಿದುಕೊಂಡು ಧ್ವಜಾರೋಹಣ ನೆರವೇರಿಸಿದರು.
ಕಲ್ಯಾಣ ಕರ್ನಾಟಕ ಏಳ್ಗೆಗೆ ಜಯಘೋಷ ಮೊಳಗಿಸಿದರು. ಭಾರತಾಂಬೆಗೆ ಜಯಕಾರ ಹಾಕಿದರು ಅಲ್ಲದೆ ವಿಶೇಷವಾಗಿ ಹೈಕ ಭಾಗವನ್ನು ನಿಜಾಮರ ಕಪಿ ಮುಷ್ಠಿಯಿಂದ ಬಿಡುಗಡೆಗೊಳಿಸಿ ಸ್ವಾತಂತ್ರ್ಯ ಒದಗಿಸಿಕೊಟ್ಟ ವಜ್ರಕಾಯ ಸರ್ಧಾರ ವಲ್ಲಭಬಾಯಿ ಪಟೇಲ್ ಅವರಿಗೆ ಪೂಜೆ ಸಲ್ಲಿಸಿ ನಮಿಸಿದರು.
ಶಾಲಾ ಶಿಕ್ಷಕ ದೀಪಕ ಗಾಳಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥ ಸಗರ ನಾರಾಯಣಾಚಾರ್ಯ ಉಪಸ್ಥಿತಿ ಇದ್ದರು.