ಕೊಳ್ಳೂರ(ಎಂ) ಸೇತುವೆ ಜಲಾವೃತ- ರಸ್ತೆ ಸಂಚಾರ ಸ್ಥಗಿತ
ಯಾದಗಿರಿಃ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾದ ಹಿನ್ನೆಲೆ ಕೃಷ್ಣಾನದಿಗೆ ಅಪಾರ ಪ್ರಮಾಣದ ನೀರು ಹರಿಬಿಡಲಾಗಿದೆ. ಹೀಗಾಗಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರ(ಎಂ) ಸೇರುವೆ ಮುಳುಗಡೆಯಾಗಿದೆ.
ಇದರಿಂದಾಗಿ ಅಂತರಾಜ್ಯ ಸಂಪರ್ಕ ಕಡಿತಗೊಂಡಿದೆ. ಕಳೆದ ವಾರದಿಂದಲೇ ಸೇತುವೆ ಮುಳಗಡೆ ಭೀತಿಯಲ್ಲಿತ್ತು. ಇದೀಗ 2.60 ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವ ಹಿನ್ನೆಲೆ ಸೇತುವೆ ಮುಳುಗಿದೆ. ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಕಲಬುರ್ಗಿ- ಶಹಾಪುರ ಮೂಲಕ ದೇವದುರ್ಗ ತಲುಪಬೇಕಾದರೆ ಬೇರೆ ಮಾರ್ಗ ಅನುಸರಿಸಬೇಕು. ಸುರಪುರ ತಿಂಥಿಣಿ ಮೂಲಕ ದೇವದುರ್ಗಕ್ಕೆ ಹೋಗಬೇಕಾಗಿದೆ. ಸುಮಾರು 45 ಕಿ.ಮೀ. ದೂರ ಕ್ರಮಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
ಇನ್ನು ನೀರು ಬಿಡುವ ಸಾಧ್ಯತೆ ಜಾಸ್ತಿ ಇದ್ದು, ಈಗಾಗಲೆ ಬಸವಸಾಗರ ಜಲಾಶಯದ 25 ಗೇಟ್ ಗಳನ್ನು ತೆಗೆದು ನೀರು ಹರಿಸಲಾಗಿದೆ. ಮಹಾರಾಷ್ಟ್ರ ದಲ್ಲಿ ಮಳೆ ಮುಂದುಬರೆದಿದ್ದು, ಅಪಾಯದಮಟ್ಟ ಮೀರಿ ನೀರು ಹರಿದು ಬರುತ್ತಿದೆ ಎನ್ನಲಾಗಿದೆ. ಹೀಗಾಗಿ ಕೃಷ್ಣಾ ತೀರದ ಜನ ಎಚ್ಚರಿಕೆವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.