ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲು
ಉತ್ತರ ಕನ್ನಡಃ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದಲ್ಲಿ ಓರ್ವ ಬಾಲಕಿಗೆ ಚಾಕು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟರ್‍ನಲ್ಲಿ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ ಆರೋಪದಡಿ ಪೊಲೀಸರು ಸಂಸದೆ ಶೋಭಾ ಮೇಲೆ ಪ್ರಕರಣ ದಾಖಲು ಮಾಡಿದ ಘಟನೆ ನಡೆದಿದೆ.
ಚಾಕು ಹಿರಿತಕ್ಕೆ ಸಂಬಂಧಿಸಿದಂತೆ ಬಾಳಕಿಯನ್ನು ವಿಚಾರಣಗೊಳಪಡಿಸಿದ ಪೊಲೀಸರು, ಬಾಲಕಿಯೇ ತಾನೇ ಮುಳ್ಳಿನಿಂದ ಕೈಗೆ ಪರಿಚಿಕೊಂಡಿದ್ದಾಳೆ ಎಂಬುದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಅವರು ಟ್ವೀಟ್ ಮಾಡಿದ್ದು, ಸುಳ್ಳು ಆರೋಪವೆಂಬ ಕಾರಣಕ್ಕೆ ಅವರ ಮೇಲೆ ಹೊನ್ನಾವರ ಠಾಣೆ ಪೊಲೀಸರು ಸುಮೋಟೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.
ಪ್ರಕರಣ ಕುರಿತು ಸಂಸದೆ ಶೋಭಾ ಅವರ ಸ್ಪಷ್ಟನೆ ಅಗತ್ಯವಿದೆ. ಎಲ್ಲವೂ ಪೊಲೀಸರದ್ದೆ ನಿಜವೆಂದು ಹೇಳಲಾಗದು. ಈ ಪ್ರಕರಣದಲ್ಲಿ ಬಾಲಕಿ ಪೋಷಕರು ಆತಂಕಗೊಂಡು ಬಾಲಕಿಯಿಂದ ತಾನೇ ಕೈಯಾರ ಮುಳ್ಳಿನಿಂದ ಪರಚಿಕೊಂಡಿದ್ದೇನೆ ಎಂದು ಹೇಳಿಸಿರಬಹುದು ಎಂಬ ಶಂಕೆಯು ಸಾರ್ವಜನಿಕವಾಗಿ ವ್ಯಕ್ತವಾಗಿದೆ. ಹೀಗಾಗಿ ಸಂಸದೆ ಶೋಭಾ ಮತ್ತು ಬಾಲಕಿಯ ಪೋಷಕರು ಏನು ಹೇಳಿಕೆ ನೀಡಲಿದ್ದಾರೋ ಕಾದು ನೋಡಬೇಕು.