ಶಹಾಪುರದಲ್ಲಿ ಫೆ.9 ರಂದು ರಸಮಂಜರಿ ಕಾರ್ಯಕ್ರಮ
ಫೆ.9 ರಂದು ನಮ್ಮ ಊರು ನನ್ನ ಹಾಡು ಕಾರ್ಯಕ್ರಮ
ಯಾದಗಿರಿ, ಶಹಾಪುರ: ಶ್ರೀ ಗುರು ಕೃಪಾ ಸಂಗೀತ ಸಾಂಸ್ಕøತಿಕ ಕಲಾಸಂಸ್ಥೆ(ರಿ) ವತಿಯಿಂದ ಫೆ. 9 ರಂದು
ಸಂಜೆ 6 ಗಂಟೆಗೆ ನಗರದ ಸಿ.ಪಿ.ಎಸ್. ಶಾಲಾ ಮೈದಾನದಲ್ಲಿ ಅಕ್ಷಯ ಮೆಲೋಡಿಸ್ ಅವರ 2 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ನಮ್ಮ ಊರು ನನ್ನ ಹಾಡು ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಸ್ಥಳೀಯ ಗುಂಬಳಾಪುರ ಮಠದ ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯರು ಮತ್ತು ಕಾಳಹಸ್ತೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಲಿದ್ದು, ಅಂಬರೀಶಗೌಡ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ, ಸುರೇಂದ್ರ ಪಾಟೀಲ ಮಡ್ನಾಳ, ಬಸವರಾಜ ಹಿರೇಮಠ ಪತ್ರಕರ್ತ ಸಂಘದ ಅಧ್ಯಕ್ಷ ನಾರಾಯಣಾಚಾರ್ಯ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಸಾಧಕರಿಗೆ ಸನ್ಮಾನ, ಸ್ಥಳೀಯ ಕಲಾವಿದರಿಂದ ಸಂಗೀತ ರಸಮಂಜರಿ, ನೃತ್ಯ ಹಾಸ್ಯ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಕಾರಣ ಸಾರ್ವಜನಿಕರು ಅಂದಿನ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ಸಿಗೆ ಸಹಕರಿಸಬೇಕೆಂದು ಮೆಲೋಡಿಸ್ ಸಂಸ್ಥಾಪಕ ಬಾಲು.ಆರ್.ಕೆ. ಮತ್ತು ಗೆಳೆಯರ ಬಳಗ ಮನವಿ ಮಾಡಿದೆ.
———————