ಧರ್ಮಸ್ಥಳ ಗ್ರಾಮಾಭಿವೃದ್ಧಿಃ ಸ್ವ-ಉದ್ಯೋಗ ವಿಚಾರ ಸಂಕಿರಣ
ಶಹಾಪುರಃ ಪ್ರತಿಯೊಬ್ಬರು ಸ್ವಾವಲಂಬಿಯಾಗಿ ಬದುಕಲು ಕರೆ
ಶಹಾಪುರಃ ಪ್ರತಿಯೊಬ್ಬರು ಸ್ವದುಡಿಮೆ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳಬೇಕು. ಬೇರೆಯೊಬ್ಬರ ಮೇಲೆ ಅವಲಂಬಿತ ಬದುಕು ನಡೆಸದೆ. ಸ್ವ-ಸಾಮಥ್ರ್ಯದಿಂದ ದುಡಿದು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಅದಕ್ಕೆ ಬೇಕಾದ ಸಹಕಾರ, ಮಾರ್ಗದರ್ಶನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನೀಡಲಿದೆ ಎಂದು ಯೋಜನಾಧಿಕಾರಿ ಕೆ.ಮೋಹನ್ ತಿಳಿಸಿದರು.
ತಾಲೂಕಿನ ಗೋಗಿ(ಪಿ) ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ವತಿಯಿಂದ ಆಯೋಜಿಸಿದ್ದ ಹೈನುಗಾರಿಕೆ ಮತ್ತು ಸ್ವ-ಉದ್ಯೋಗ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಧರ್ಮಸ್ಥಳ ಯೋಜನೆಯು ಮಹಿಳೆಯರಿಗೆ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸ್ವ-ಉದ್ಯೋಗ ಕಂಡುಕೊಳ್ಳಲು ಬೇಕಾದ ಸಹಕಾರ ಮತ್ತು ಉದ್ಯೋಗಕ್ಕೆ ತಕ್ಕ ತರಬೇತಿ ಸಹ ನೀಡಲಿದೆ.
ಆದರೆ ದುಡಿಯುವ ಜನರ ಅಭಿಲಾಷೆಯಂತೆ ಸಂಸ್ಥೆ ಸಹಕಾರ ನೀಡಲಿದೆ. ಪ್ರಾಮಾಣಿಕವಾಗಿ ದುಡಿದು ಅಭಿವೃದ್ಧಿ ಹೊಂದಬೇಕು. ಆ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿ ಬದುಕಬೇಕು. ಅಲ್ಲದೆ ಜೊತೆಗೆ ಮತ್ತೊಬ್ಬರಿಗೆ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ದುಡಿಯುವ ವರ್ಗಕ್ಕೆ ಸೇರಿಸಿಕೊಳ್ಳಬೇಕು. ಸಂಸ್ಥೆಯ ಸಹಕಾರ, ಉತ್ತೇಜನ ನೀಡುವ ಉದ್ಯೋಗಗಳನ್ನು ಸವಿವವರವಾಗಿ ತಿಳಿಸಿದರು.
ಪಶುಸಂಗೋಪನ ಇಲಾಖೆ ಅಧಿಕಾರಿ ಡಾ.ವಿಯಜಕುಮಾರ ಲಾಭದಾಯಕ ಹೈನುಗಾರಿಕೆ ಬಗ್ಗೆ ಮಾಹಿತಿ ನೀಡಿದರು. ಸರಸ್ವತಿ ಬಿರಾದರ ಮಹಿಳೆಯರ ಸ್ವಾವಲಂಬನೆಯ ಬಗ್ಗೆ ಮಾಹಿತಿ ನೀಡಿದರು. ಮತ್ತು ಲಕ್ಷ್ಮೀಕಾಂತ ಕುಲಕರ್ಣಿ ಮಾತನಾಡಿ ಸೋಲಾರ ಅಳವಡಿಕೆಯ ಕುರಿತು ಮಾಹಿತಿ ನೀಡಿದರು.
ತಾಪಂ ಸದಸ್ಯೆ ಸಂಗೀತಾ ಈರಣ್ಣಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಸಾಬವ್ವ ದೇಸಾಯಿ ಅಧ್ಯಕ್ಷತೆವಹಿಸಿದ್ದರು. ಗ್ರಾಮ ಮುಖಂಡರಾದ ಬಸವರಾಜ ಸಗರವ, ಅಶೋಕ ದೋತ್ರೆ, ತುಳಜಾರಾಮ ಜಿಂದೆ, ಚಂದ್ರಶೇಖರ್ ಬಾವಿ ಉಪಸ್ಥಿತರಿದ್ದರು.
ಕೃಷಿ ಅಧಿಕಾರಿ ಪ್ರಕಾಶ.ಜಿ. ನಿರೂಪಿಸಿದರು. ವಲಯ ಮೇಲ್ವಿಚಾರಕ ತಿರ್ಥರಾಜ ಸ್ವಾಗತಿಸಿದರು. ಗ್ರಾಮದ ಸೇವಾ ಪ್ರತಿನಿಧಿಗಳಾದ ಶೀಲಾ, ಶರಣಮ್ಮ, ಅಂಬಿಕಾ, ವನೀತಾ, ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 250 ಕ್ಕೂ ಹೆಚ್ಚು ರೈತಬಾಂಧವರು ಭಾಗವಹಿಸಿದ್ದರು.