ಪ್ರಮುಖ ಸುದ್ದಿ
ರೈಲ್ವೆ ಪೊಲೀಸರಿಂದ ಬಾಲಕನ ರಕ್ಷಣೆ
ಯಾದಗಿರಿ: ರೈಲ್ವೆ ನಿಲ್ದಾಣದಲ್ಲಿ ಪೋಷಕರಿಂದ ತಪ್ಪಿಸಿಕೊಂಡ ಬಾಲಕನನ್ನು ರೈಲ್ವೆ ಸುರಕ್ಷಾ ಬಲ ಪೊಲೀಸರು ರಕ್ಷಿಸಿದ್ದಾರೆ.
ರಾಯಚೂರ ಜಿಲ್ಲೆಯ ಮಾನ್ವಿ ತಾಲೂಕಿನ ಶಿರವಾರ ಗ್ರಾಮದ ಅಂಬರೀಶ ಹಾಗೂ ಕಮಾಲಾಕ್ಷೀ ಅವರ ಮಗ ಶ್ರೀಧರ ಎಂಬ ಬಾಲಕನೇ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ.
ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕ ಈತನನ್ನು,
ರೈಲ್ವೆ ಪೊಲೀಸರು ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಕ್ಕಳ ರಕ್ಷಣಾ ಅಧಿಕಾರಿಗೆ ಒಪ್ಪಿಸಲಾಯಿತು.
ರೈಲ್ವೆ ಎಸ್ ಐ ಕೃಷ್ಣ ಮೋಹನ್, ಹರೀಶ ಚಂದ್ರ, ಮಾಲು ಲಮಾಣಿ ರಕ್ಷಣೆ ಮಾಡಿದ ಅಧಿಕಾರಿಗಳು. ಈ ವೇಳೆ ಮಕ್ಕಳ ರಕ್ಷಣಾ ಅಧಿಕಾರಿ ಗೋವಿಂದ ರಾಠೋಡ್, ನಾಗಪ್ಪ ಹಾಗೂ ಶರಬಯ್ಯ ಇದ್ದರು.