ಕಾರ್ಮಿಕರು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆಯಿರಿ-ಶಬೀರಾಬೇಗಂ
ಕಾರ್ಮಿಕರು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆಯಿರಿ-ಶಬೀರಾಬೇಗಂ
ಬೇವಿನಹಳ್ಳಿಯಲ್ಲಿ ಇ-ಶ್ರಮ ಕಾರ್ಡ್ ವಿತರಣೆ
yadgiri, ಶಹಾಪುರಃ ಕಾರ್ಮಿಕರ ಹಿತರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪರತಿ ಯೋಜನೆಗಳು ಕಾರ್ಮಿಕರ ಬದುಕಿಗೆ ಆಸರೆಯಾಗಿವೆ. ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕಾರ್ಮಿಕರ ಕುಟುಂಬಗಳು ಸದೃಢವಾಗಬೇಕು ಎಂದು ತಾಲೂಕು ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕಿ ಸಾಬೀರಾಬೇಗಂ ಕರೆ ನೀಡಿದರು.
ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಕಾರ್ಡ್ ವಿತರಿಸಿ ಅವರು ಮಾತನಾಡಿದರು.
ಹಲವಡೆ ನಕಲಿ ದಾಖಲೆ ಸೃಷ್ಟಿಸಿಕೊಂಡು ಇ-ಶ್ರಮ ಕಾರ್ಡ್ ಪಡೆಯುವ ಘಟನೆಗಳು ನಡೆಯುತ್ತಿವೆ. ಅರ್ಹರಿಗೆ ಮಾತ್ರ ಇ-ಶ್ರಮ ಕಾರ್ಡ್ ನೀಡಲಾಗುವದು. ಅಲ್ಲದೆ ನಕಲಿ ದಾಖಲೆ ಸಲ್ಲಿಸಿ ಇ-ಶ್ರಮ ಕಾರ್ಡ್ ಪಡೆಯಲು ಅವಕಾಶವಿಲ್ಲ. ಸಂಘಟನೆಗಳು ಅರ್ಹರಿಗೆ ಮಾತ್ರ ಕಾರ್ಡ್ ಮಾಡಿಸಿಕೊಡುವಲ್ಲಿ ಶ್ರಮಿಸಬೇಕು. ಈ ಯೋಜನೆ ಲಾಭ ಅನರ್ಹರರ ನಕಲಿ ಮಂದಿಯ ಪಾಲಾಗದಂತೆ ಎಲ್ಲರೂ ಎಚ್ಚರವಹಿಸಬೇಕೆಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಜಗಧೀಶ ಎಂ, ಕಾರ್ಮಿಕರ ಸಂಘದ ಅಧ್ಯಕ್ಷ ಪ್ರದೀಪ ಅಣಬಿ, ಹಣಮಂತ ದೋರನಹಳ್ಳಿ, ಲಕ್ಷ್ಮಣ ಹೊಸಮನಿ, ರಾಮು ರಾಠೋಡ, ತಮ್ಮಣ್ಣ ಜಹಾಗಿರದಾರ, ಮೌನೇಶ ಶಹಾಪುರ ಇತರು ಉಪಸ್ಥಿತರಿದ್ದರು.