ಸಂಡೆ ಲಾಕ್ ಡೌನ್ ಮೇಲ್ನೋಟಕ್ಕೆ ಸ್ತಬ್ಧ – ಗಲ್ಲಿಗಳಲ್ಲಿ ವಹಿವಾಟು ಸಾಮಾನ್ಯ
ಸಂಡೆ ಲಾಕ್ ಡೌನ್ ಮೇಲ್ನೋಟಕ್ಕೆ ಸ್ತಬ್ಧ – ಗಲ್ಲಿಗಳಲ್ಲಿ ವಹಿವಾಟು ಸಾಮಾನ್ಯ
ಶಹಾಪುರಃ ಕೋವಿಡ್ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ರವಿವಾರ ಸಂಪೂರ್ಣ ಲಾಕ್ ಡೌನ್ ಗೆ ಆದೇಶ ನೀಡಿತ್ತು. ಅದರಂತೆ ಶಹಾಪುರ ನಗರದಲ್ಲಿ ಶನಿವಾರ ಸಂಜೆಯಿಂದಲೇ ಲಾಕ್ ಡೌನ್ ಮುಂದುವರೆದಿತ್ತು. ಬಾನುವಾರ ಎಲ್ಲಾ ವ್ಯಾಪಾರ ವಹಿವಾಟು ಬಂದ್ ಆಗಿದ್ದರಿಂದ ಇಡಿ ನಗರ ಸ್ತಬ್ಧವಾಗಿತ್ತು.
ಆದರೆ ಹಲವಾರು ಬಡಾವಣೆಗಳಲ್ಲಿ ಕಿರಾಣಿ, ಸ್ಟೇಷನರಿ ಅಂಗಡಿಗಳು ವ್ಯಾಪಾರ ವಹಿವಾಟು ನಡೆಸುತ್ತಿರುವದು ಕಂಡು ಬಂದಿತು.
ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಬಸ್ ನಿಲ್ದಾಣ ಬಿಕೋ ಎನ್ನುವಂತಿತ್ತು. ಮುಖ್ಯ ರಸ್ತೆ, ಹೆದ್ದಾರಿ ಮಾತ್ರ ಹಾಯಾಗಿ ಖಾಲಿಯಾಗಿ ಮಲಗಿದ್ದವು. ಆದರೆ ಸಂಜೆಯಾಗುತ್ತಿದ್ದಂತೆ ಒಂದಿಷ್ಟು ಬೈಕ್‍ಗಳು ಮತ್ತು ಕಾರುಗಳ ಓಡಾಟ ಕಂಡು ಬಂದಿತು. ಬಸವೇಶ್ವರ ನಗರ, ದೇವಿ ನಗರ ಸೇರಿದಂತೆ ಹಲವಡೆ ಬಡಾವಣೆಯಲ್ಲಿ ಕಿರಾಣಿ, ಸ್ಟೇಷನರಿ ಅಂಗಡಿಗಳು ತೆರೆದಿರುವದು ಕಂಡು ಬಂದಿತು. ನಗರದ ಬೀದರ – ಶ್ರೀರಂಗಪಟ್ಟಣ ಹೆದ್ದಾರಿ ಮಾತ್ರ ಶಾಂತವಾಗಿತ್ತು. ಖಾಲಿ ಖಾಲಿಯಾಗಿರುವದು ಕಂಡು ಬಂದಿತ್ತು.
ಹೀಗಾಗಿ ಲಾಕ್ ಡೌನ್ ಯಶಸ್ವಿಯಾಗಿ ಕಂಡು ಬಂದರೂ ಬಡವಾಣೆಗಳಲ್ಲಿ ಜನ ತಂಡೋಪ ತಂಡವಾಗಿ ಕುಳಿತು ಹರಟೆ ಹೊಡೆಯುತ್ತಿದ್ದರು. ಬಡಾವಣೆಯ ಸಣ್ಣಪುಟ್ಟ ಅಂಗಡಿಗಳು ತೆರೆದಿದ್ದವು. ಮಾಸ್ಕ್ ಧರಿಸದೆ ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿರುವದು ಬಹುತೇಕ ಬಡಾವಣೆಗಳಲ್ಲಿ ಕಂಡು ಬಂದ ದೃಶ್ಯವಳಿ. ಹೀಗಾಗಿ ಸರ್ಕಾರ ಲಾಕ್ ಡೌನ್ ಘೋಷಿಸಿರುವದು ಯಾರ ಒಳಿತಿಗಾಗಿ ಎಂಬುದನ್ನೆ ಜನ ಮರೆತಿದ್ದಾರೆ ಎಂದು ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸಿದ್ದಾರೆ.