ಶಹಾಪುರ ಪತ್ರಕರ್ತರಿಂದ ತಹಸೀಲ್ದಾರರಿಗೆ ಮನವಿ
ಸುದ್ದಿ ಮಾಡಲು ಹೋದ ಪತ್ರಕರ್ತನ ಮೇಲೆ ಕೇಸ್‍ಃ ಖಂಡನೆ
ಶಹಾಪುರಃ ತಾಲೂಕಿನ ದೋರನಹಳ್ಳಿ ಗಲಭೆ ಸುದ್ದಿ ಮಾಡಲು ಹೋದ ಗ್ರಾಮೀಣ ಪತ್ರಕರ್ತ ವಿಶಾಲ ಸಿಂಧೆಯವರ ಹೆಸರನ್ನು ಜಾತಿ ನಿಂದನೆ ಪ್ರಕಣದಡಿ ಸೇರಿಸಿದ್ದನ್ನು ಖಂಡಿಸಿ ತಾಲೂಕಾ ಪತ್ರಕರ್ತರಿಂದ ಮಂಗಳವಾರ ತಹಸೀಲ್ದಾರ ಮತ್ತು ಪಿಐ ಚೆನ್ನಯ್ಯ ಹೀರೆಮಠ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತರು ಸ್ವಗ್ರಾಮದಲ್ಲಿ ಆಕಸ್ಮಿಕವಾಗಿ ಘಟನೆಗಳು ನಡೆದಾಗ ಸ್ಥಳೀಯವಾಗಿ ವಾಸವಿರುವ ಪತ್ರಕರ್ತರು ಗಲಭೆ ಕುರಿತು ವರದಿ ಸಂಗ್ರಹ ಮಾಡುವದು ಸಹಜ ಹಾಗೂ ಕರ್ತವ್ಯ. ಕೆಲವರು ಇದನ್ನೆ ಅಪಾರ್ಥ ಮಾಡಿಕೊಂಡು ಪತ್ರಕರ್ತರನ್ನೇ ಪ್ರಕರಣದಡಿಯಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದು ಮಾಧ್ಯಮವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂದಯ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಕೂಡಲೆ ಪತ್ರಕರ್ತರಾದ ವಿಶಾಲ ಸಿಂಧೆಯವರನ್ನು ದೋರನಹಳ್ಳಿ ಪ್ರಕರಣದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ನಾರಾಯಣಾಚಾರ್ಯ ಸಗರ, ಈರಣ್ಣ ಹಾದಿಮನಿ, ಮುಕ್ತಾರ ಅಹ್ಮದ್, ಅಮರೇಶ ಹೀರೆಮಠ, ಈರಣ್ಣ ಮೌರ್ಯ. ಚಂದ್ರಶೇಖರ ಕಟ್ಟಿಮನಿ, ಮಹೇಶ ಪತ್ತಾರ, ಮಲ್ಲಯ್ಯ ಪೋಲಂಪಲ್ಲಿ, ಸಿದ್ದು ಪಟ್ಟೆದಾರ ಇತರರಿದ್ದರು.