ಯಾರೊಬ್ಬ ಲಾಯರ್ ಕರೆ ತಂದಿಲ್ಲ, ಈ ಕೇಸ್ಗೆ ನಾನೇ ಲಾಯರ್ -ಅನುಶ್ರೀ
ಯಾರೊಬ್ಬ ಲಾಯರ್ ಕರೆ ತಂದಿಲ್ಲ, ಈ ಕೇಸ್ಗೆ ನಾನೇ ಲಾಯರ್ -ಅನುಶ್ರೀ
ಮಂಗಳೂರುಃ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನನ್ನು ವಿಚಾರಣೆಗಾಗಿ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಅದರಂತೆ ನಾನು ಹಾಜರಾಗಿ ವಿಚಾರಣೆಗೆ ಸ್ಪಂಧಿಸಿದ್ದೇನೆ.
ನಾನ್ಯಾವ ಪಾರ್ಟಿಯಲ್ಲೂ ಭಾಗವಹಿಸಿಲ್ಲವೆಂದು ನಟಿ, ಖ್ಯಾತ ನಿರೂಪಕಿ ಅನುಶ್ರೀ ತಿಳಿಸಿದರು.
ನಗರದ ಸಿಸಿಬಿ ಕಛೇರಿಯಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಕಿಶೋರ ಶಟ್ಟಿ ಮತ್ತು ತರುಣ್ ಪರಿಚಯವಿದೆ. 12 ವರ್ಷದಿಂದ ಪರಿಚಯಸ್ಥರು. ಹಾಗಂಥ ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದಿರುವ ಕಾರಕ್ಕೆ ನಾನೊಬ್ಬಳೇ ಹಾಜರಾಗಿದ್ದೇನೆ.
ಯಾರೊಬ್ಬರು ವಕೀಲರನ್ನು ನಾನು ಕರೆದುಕೊಂಡು ಬಂದಿಲ್ಲ. ಈ ಕೇಸಲ್ಲಿ ನನಗೆ ನಾನೇ ಲಾಯರ್ ಎಂದ ಅವರು, ನಾನು ಯಾವುದೇ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಪಾರ್ಟಿ ಯಲ್ಲಿ ಭಾಗವಹಿಸಿದ್ದ ಫೋಟೊ ಎಲ್ಲಿದೆ.? ಹೀಗಾಗಿ ನಾನೊಬ್ಬಳೇ ಬಂದಿದ್ದೇನೆ ನನಗೆ ನಾನೇ ಲಾಯರ್ ಎಂದು ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದರು.