ಪ್ರಮುಖ ಸುದ್ದಿ

ಶರಣ ಸಾಹಿತ್ಯದ ಕೊಂಡಿ ಕಳಚಿದೆ – ಗುರುಬಸಯ್ಯ ಗದ್ದುಗೆ ಕಂಬನಿ

ಸಾಹಿತಿ ಡಾ.ಈಶ್ವರಯ್ಯಮಠ ಅವರಿಗೆ ಶ್ರದ್ಧಾಂಜಲಿ

yadgiri, ಶಹಾಪುರಃ ಕಲ್ಯಾಣ ಕರ್ನಾಟಕದ ಶರಣ ಸಾಹಿತ್ಯದ ಕೊಂಡಿಯಾಗಿ ಕೆಲಸ ನಿರ್ವಹಿಸಿದ ಸಾಹಿತಿ ಡಾ.ಈಶ್ವರಯ್ಯ ಮಠ ನಿಧನದಿಂದ ಕಲ್ಯಾಣ ಕರ್ನಾಟಕದ ಶರಣ ಸಾಹಿತ್ಯದ ಕೊಂಡಿ ಕಳಚಿದಂತಾಗಿದೆ ಎಂದು ಕಸಾಪ ಮಾಜಿ ಅಧ್ಯಕ್ಷ ಗುರುಬಸ್ಸಯ್ಯ ಗದ್ದುಗೆ ಹೇಳಿದರು.
ನಗರದ ಗ್ರಾಮೀಣ ಗೆಳೆಯರ ಬಳಗದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಈಶ್ವರಯ್ಯ ಮಠ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಗರ ನಾಡಿನ ಸಾಹಿತ್ಯ ಹಾಗೂ ಸಂಸ್ಕøತಿಯ ಬಗ್ಗೆ ಆಳವಾಗಿ ಅರಿತುಕೊಂಡಿದ್ದ ಡಾ.ಈಶ್ವರಯ್ಯ ಮಠ, ತಮ್ಮ ವೈಚಾರಿಕ ನುಡಿಗಳ ಮೂಲಕ ಸಮುದಾಯಕ್ಕೆ ಹೊಸ ಶಕ್ತಿ ತುಂಬುತ್ತಿದ್ದರು. ಮೂಢ ನಂಬಿಕೆಗಳನ್ನು ವಿರೋಧಿಸುತ್ತಿದ್ದರು. ಅವರ ನೇರ-ನುಡಿ, ನಿಷ್ಟುರ ಭಾವ ನಮಗೆಲ್ಲರಿಗೂ ಸ್ಪೂರ್ತಿ. ಅಲ್ಲದೆ, ಈಶ್ವರಯ್ಯ ಮಠ ಬಡತನದಲ್ಲಿ ಬೆಳೆದಿದ್ದರಿಂದ ಬಡ ವಿದ್ಯಾರ್ಥಿಗಳಿಗೆ ವರದಾನವಾಗಿದ್ದರು. ತತ್ವಪದ ಹಾಗೂ ವಚನ ಸಾಹಿತ್ಯದಲ್ಲಿ ಎತ್ತಿದ ಕೈ. ನಾನು ಶಹಾಪುರದ ಕಸಾಪ ಅಧ್ಯಕ್ಷನಾಗಿದ್ದಾಗ ಅವರು ಸುರಪುರದ ಕಸಾಪ ಅಧ್ಯಕ್ಷರಾಗಿದ್ದರು ಎಂದು ತಮ್ಮ ಮತ್ತು ಅವರ ನಡುವೆ ಇದ್ದಂತಹ ಒಡನಾಟದ ಬಗ್ಗೆ ವಿವರಿಸಿದರು.

ಶಿಕ್ಷಕ ಗುಂಡೂರಾವ್ ಅರವತ್ತಗಿರಿ ಮಾತನಾಡಿ, ಸಾಹಿತಿ ಈಶ್ವರಯ್ಯ ಮಠ ಅವರು ಶರಣ ಸಾಹಿತ್ಯದಲ್ಲಿ ಅಪಾರ ಜ್ಞಾನ ಉಳ್ಳವರಾಗಿದ್ದರು. ಉತ್ತಮ ವಾಗ್ಮಿಯಾಗಿದ್ದರು. ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿ ಸಗರನಾಡಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದರು. ಅವರ ನಿಧನದಿಂದ ಸಗರನಾಡಿನ ಸಾಹಿತ್ಯ ಹಾಗೂ ಸಾಂಸ್ಕøತಿಕ ವಲಯ ಬಡವಾಗಿದೆ ಎಂದರು. ವಿಶ್ವನಾಥ ಸ್ಥಾವರಮಠ, ಬಳಗದ ಅಧ್ಯಕ್ಷ ಮಹಾಂತೇಶ ಗಿಂಡಿ, ಶಂಕರ ಹುಲಿಕಲ್, ವೀರೇಶ ಉಳ್ಳಿ, ಮಹೇಶ ಪ್ರತಿಹಸ್ತ, ರಮೇಶ ಶಿರ್ಣಿ, ಚನ್ನಯ್ಯ ಸ್ಥಾವರಮಠ, ನಿಂಗಣ್ಣ ತೇಕರಾಳ ಇತರರಿದ್ದರು. ಇದೇ ಸಂದರ್ಭದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

Related Articles

Leave a Reply

Your email address will not be published. Required fields are marked *

Back to top button