ಪ್ರಮುಖ ಸುದ್ದಿ
ಬಸವ ಸಾಗರದಿಂದ ಮತ್ತೆ ನಾಲ್ಕು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ಕೃಷ್ಣಾ ಪ್ರವಾಹ-ಗ್ರಾಮಗಳಲ್ಲಿ ಡಂಗುರ ಮೂಲಕ ಎಚ್ಚರಿಕೆ
ಯಾದಗಿರಿಃ ಆಲಮಟ್ಟಿ ಜಲಾಶಯದಿಂದ ಒಳ ಹರಿವು ಹೆಚ್ಚಿದ ಹಿನ್ನೆಲೆ, ನಾರಾಯಣಪುರದ ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಮತ್ತಷ್ಟೂ ಹೆಚ್ಚು ನೀರು ಬಿಡುಗಡೆೆ ಮಾಡಲಾಗುತ್ತತಿದೆ.
ಸದ್ಯ, ಮೂರು ಲಕ್ಷ ಏಳು ಸಾವಿರದ ಇಪ್ಪತ್ತು ಕ್ಯೂಸೆಕ್ ನೀರು ಬಿಡಲಾಗಿದ್ದು, ಮಧ್ಯಾಹ್ನ 1 ಗಂಟೆಗೆ 3 ಲಕ್ಷ ಅರವತ್ತು ಸಾವಿರ ಕ್ಯೂಸೆಕ್ ಹಾಗೂ ಸಂಜೆ 7 ಗಂಟೆಗೆ 4 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುವುದು ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.