ಪ್ರಮುಖ ಸುದ್ದಿ
ಸಿಎಂ ಸಿದ್ರಾಮಯ್ಯ ಅಹಿಂದ ಪರವು ಇಲ್ಲ, ಬಡವರ ಪರವಾಗಿಯೂ ಉಳಿದಿಲ್ಲ: ವರ್ತೂರ್ ಪ್ರಕಾಶ
ಅಹಿಂದ ವರ್ಗವನ್ನು ಕಾಂಗ್ರೆಸ್ ಪಕ್ಷ ನಿರ್ಲಕ್ಷಿಸಿದೆ : ವರ್ತೂರ ಆರೋಪ
ಯಾದಗಿರಿಃ ಅಹಿಂದ ವರ್ಗವನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣ ನಿರ್ಲಕ್ಷವಹಿಸಿದೆ. ಸಿಎಂ ಸಿದ್ರಾಮಯ್ಯನವರು ಬಡವರ ಪರವು ಇಲ್ಲ ಅಹಿಂದ ಪರವಾಗಿಯೂ ಇಲ್ಲ ಎಂದು ಶಾಸಕ ವರ್ತೂರ ಪ್ರಕಾಶ ಹೇಳಿದರು.
ನಗರದ ಚರ್ಚ್ ಹಾಲ್‍ನಲ್ಲಿ ‘ನಮ್ಮ ಕಾಂಗ್ರೆಸ್ ಪಕ್ಷ’ ದಿಂದ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ ಹಿರಿಯರನ್ನು ಮೂಲೆ ಗುಂಪಾಗಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಬೇಸತ್ತು ಹೊರ ಹೋಗುತ್ತಿದ್ದವರಿಗಾಗಿಯೇ ನಾನು ‘ನಮ್ಮ ಕಾಂಗ್ರೆಸ್ ಪಕ್ಷ’ ಕಟ್ಟುತ್ತಿದ್ದೇನೆ.
ಜನರ ಬೆಂಬಲ ನೋಡಿ ಪಕ್ಷ ಕಟ್ಟುತ್ತೇನೆ. ಸಮರ್ಪಕ ಬೆಂಬಲ ದೊರೆಯದಿದ್ದಲ್ಲಿ ಪಕ್ಷ ರಚನೆ ಕೈಬಿಡಲಾಗುವುದು. ಇದೇ ಡಿ.19 ರಂದು ಕೂಡಲ ಸಂಗಮದಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದು, ಅಂದೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ವರ್ತೂರ ಪ್ರಕಾಶ ತಿಳಿಸಿದರು.