ಪ್ರಮುಖ ಸುದ್ದಿ
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಗೆ 10ವರ್ಷ ಜೈಲು!
ಭ್ರಷ್ಟಾಚಾರ ಹಗರಣ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಗೆ 10ವರ್ಷ ಜೈಲು ವಿಧಿಸಿ ಪಾಕಿಸ್ತಾನದ ಎನ್ ಎಬಿ ನ್ಯಾಯಾಲಯ ಆದೇಶಿಸಿದೆ. ನವಾಜ್ ಶರೀಫ್ ಪುತ್ರಿ ಮರ್ಯಾಮ್ ಗೆ 7ವರ್ಷ ಹಾಗೂ ರಕ್ಷಣಾ ಕಾರ್ಯದರ್ಶಿ ಆಗಿದ್ದ ಸಫ್ದರ್ ಅವಾನ್ ಗೆ 1ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ ಎಂದು ತಿಳಿದು ಬಂದಿದೆ.