ಪ್ರಮುಖ ಸುದ್ದಿ

ದೇಶಭಕ್ತ ಭಗತ್‍ಸಿಂಗ್ ನಮಗೆಲ್ಲ ಪ್ರೇರಣೆ -ಸಿದ್ದು ಆನೇಗುಂದಿ

ಭಗತ್‍ಸಿಂಗ್ ರಾಷ್ಟ್ರಪ್ರೇಮ ಯುವಕರಿಗೆ ಮಾದರಿ

ಯಾದಗಿರಿ, ಶಹಾಪುರಃ ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಭಗತ್‍ಸಿಂಗ್ ಅವರ ತತ್ವ ಆದರ್ಶಗಳು ಯುವ ಸಮುದಾಯಕ್ಕೆ ಮಾದರಿ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ತನ್ನ ಪ್ರಾಣವನ್ನು ಲೆಕ್ಕಿಸದೆ ಹೋರಾಟ ಮಾಡಿದ ಕೀರ್ತಿ ಭಗತ್ ಸಿಂಗ್ ಅವರಿಗೆ ಸಲ್ಲುತ್ತದೆ. ಅವರ ಗಟ್ಟಿತನ ದೇಶಕ್ಕಾಗಿ ಬಲಿದಾನವಾದ ಭಗತ್ ಸಿಂಗ್ ನಮಗೆಲ್ಲ ಪ್ರೇರಣೆಯಾಗಲಿ ಎಂದು ಯುವ ಮುಖಂಡ ಸಿದ್ದು ಆನೇಗುಂದಿ ತಿಳಿಸಿದರು.

ನಗರದ ಮೆಜೆಸ್ಟಿಕ್ ಏರಿಯಾದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ(ರಿ)ವತಿಯಿಂದ ಭಗತ್ ಸಿಂಗ್ ಅವರ 112 ನೇ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಇಂದಿನ ಯುವ ಪೀಳಿಗೆ ಕೇವಲ ವಾಟ್ಸಪ್, ಫೇಸ್ ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲೇ ಕಾಲಹರಣ ಮಾಡುತ್ತಿದ್ದು, ಮಹಾತ್ಮರ ಜಯಂತಿ ಅಂದು ಅವರ ಭಾವಚಿತ್ರದೊಂದಿಗೆ ತಮ್ಮದೊಂದು ಭಾವಚಿತ್ರವ ಹಾಕಿ ಶುಭಾಯಶ ಕೋರಿದರೆ ಸಾಲದು, ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಂಡು ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಬೇಕಿದೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರೆ ಏನು ಆಗದು.

ಸಮಯ ಪ್ರಜ್ಞೆ ಕಳೆಗುಂದುತ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಮುಳುಗುತ್ತಿದ್ದಾರೆ. ಅದರ ಬದಲು ಯುವಶಕ್ತಿ ಪ್ರಜಾಪ್ರಭುತ್ವಕ್ಕೆ ಪೂರಕವಾಗುವ ಕೆಲಸ ಮಾಡಬೇಕಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ 23 ನೇ ವಯಸ್ಸಿನಲ್ಲಿಯೇ ಭಗತ್ ಸಿಂಗ್ ಅವರು ತಮ್ಮ ಪ್ರಾಣಭಯವಿಲ್ಲದೆ ನಗುತ್ತಲೇ ನೇಣಿಗೆ ಕೊರಳೊಡ್ಡಿದ್ದರು. ಅಂತಹ ಮಹಾತ್ಮನಿಗೆ ನಾವೆಲ್ಲರೂ ಕೃತಜ್ಞತೆ ಸಮರ್ಪಿಸುವದು ಅಗತ್ಯವಿದೆ. ಅವರ ಸ್ಪೂರ್ತಿಯಿಂದ ದೇಶದ ಒಳಿತಿಗಾಗಿ ಸಂಘಟಿತರಾಗಿ ಕೆಲಸ ಮಾಡೋಣವೆಂದು ಕರೆ ನೀಡಿದರು.

ಯುವ ಮುಖಂಡ ವೆಂಕಟೇಶ ಟೊಣಪೆ ಮಾತನಾಡಿ, ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ, ಜನಾಂಗದ ಮೇಲೆ ದ್ವೇಷ ಸಾಧಿಸುವ ಕೆಲಸ ನಾನ್ಯಾವತ್ತು ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ ಅದು ಸ್ವಾತಂತ್ರ್ಯ ಮಾತ್ರ ಅದೊಂದೆ ನನ್ನ ಕನಸು ಎಂದು ಭಗತ್‍ಸಿಂಗ್ ಹೇಳಿದ್ದರು.

ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಭಗತ್‍ಸಿಂಗ್ ಅವರನ್ನು ಅನೌಪಚಾರಿಕವಾಗಿ ಹುತಾತ್ಮರು ಎಂದು ಕರೆಯಲಾಗುತ್ತಿದಿಯೇ ಹೊರತು ಭಾರತ ಸರ್ಕಾರದಿಂದ ಅಧಿಕೃತವಾಗಿ ಅವರಿಗೆ ಹುತಾತ್ಮ ಪಟ್ಟ ದೊರೆತಿರುವದಿಲ್ಲ ಎಂದು ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜು ಬಾಣತಿಹಾಳ, ಶಿವರಾಜ ಜಂಗಳಿ, ಸಂತೋಷ ಹಿರೇಮಠ ಅರವಿಂದ ಉಪ್ಪಿನ್, ಮೌನೇಶ ಹಳಿಸಗರ, ಮಲ್ಲು ಜಾಕಾ, ವೆಂಕಟೇಶ ಕುಲಕರ್ಣಿ, ಪ್ರಶಾಂತ ಲೋಹಾರ್, ಪವನ ಶಿರವಾಳ, ವಿಶ್ವನಾಥ ಗುಡಗಾವ್, ವಿರೇಶ ಗಂಜಿ, ವಿಶ್ವ ಅಣಬಿ, ಪ್ರಕಾಶ ಸಾಹು, ಮಲ್ಲು, ಸಾಹೇಬಗೌಡ, ಭೀಮು ಹುಲಕಲ್, ಮನೋಹರ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button