ಸೇವೆಗೆ ತಕ್ಕ ಸಂಬಳ ನೀಡದ ಸರ್ಕಾರಃ ಸುನಂದಾ ಆಕ್ರೋಶ
ಅಂಗನವಾಡಿ ನೌಕರರ ನಾಲ್ಕನೇ ಜಿಲ್ಲಾ ಸಮ್ಮೇಳನ ಬಹಿರಂಗ ಸಭೆ
ಸೇವೆಗೆ ತಕ್ಕ ಸಂಬಳ ನೀಡದ ಸರ್ಕಾರಃ ಸುನಂದಾ ಆಕ್ರೋಶ
ಅಂಗನವಾಡಿ ನೌಕರರ ನಾಲ್ಕನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆ
yadgiri, ಶಹಾಪುರಃ ಅಂಗನವಾಡಿ ನೌಕರರನ್ನು ಖಾಯಂ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಲ್ಲದೆ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸುತ್ತಿದ್ದು, ಕೇಂದ್ರದ ವಿರುದ್ಧ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಸುನಂದ ಸರ್ಕಾರದ ನೀತಿ-ರಿವಾಜುಗಳ ವಿರುದ್ಧ ಕಿಡಿಕಾರಿದರು.
ನಗರದ ಟೌನ್ ಹಾಲ್‍ನಲ್ಲಿ ನಡೆದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ 4 ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು,
ಅಂಗನವಾಡಿ ನೌಕರರಿಗೆ ಕೂಡಲೇ ಪಿಂಚಣಿ ನೀಡುವ ವ್ಯವಸ್ಥೆ ಮಾಡಬೇಕು. ಮಹಿಳಾ ನೌಕರರಿಗೆ ರಕ್ಷಣೆ ಇಲ್ಲದಾಗಿದೆ. ಕೋಮು ವಿಷ ಬೀಜ ಬಿತ್ತುವ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಅಂಗನವಾಡಿ ಕೇಂದ್ರಗಳನ್ನ ಮಕ್ಕಳ ಆಕರ್ಷಿಸುವ ಕೇಂದ್ರಗಳನ್ನಾಗಿ ಮಾಡುವ ಬದಲಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸುವ ಮೂಲಕ ಬಲಹೀನಗೊಳಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ನೌಕರರಿಂದ ಸರ್ಕಾರ ವಿವಿಧ ಯೋಜನೆಗಳ ಅನುಷ್ಟಾನಕ್ಕೆ ಸೇವೆ ಪಡೆಯುತ್ತದೆ. ಆದರೆ ಸಮರ್ಪಕವಾಗಿ ತಿಂಗಳ ವೇತನ ನೀಡುತ್ತಿಲ್ಲ. ಸೇವೆ ಹೆಸರಿನಲ್ಲಿ ಅಂಗನವಾಡಿ ನೌಕರರನ್ನು ದುಡಿಸಿಕೊಂಡು ಶ್ರಮಕ್ಕೆ ತಕ್ಕ ಗೌರವು ನೀಡುತ್ತಿಲ್ಲ ಹಣವು ವೇತನವು ನೀಡುವದಿಲ್ಲ. ಜೀತಗಾರರಂತೆ ಕೆಸಲ ಮಾತ್ರ ತೆಗೆದುಕೊಳ್ಳುತ್ತದೆ ಕೂಡಲೇ ಸರ್ಕಾರ ಇತ್ತ ಗಮನಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಅದಕ್ಕೆ ಎಲ್ಲರೂ ಸಿದ್ಧರಾಗಿರಬೇಕೆಂದು ಕರೆ ನೀಡಿದರು.
ಸಂಘದ ರಾಜ್ಯ ಉಪಾಧ್ಯಕ್ಷೆ ಶಾಂತಾ ಗುಂಟೆ ಮಾತನಾಡಿ, ಮಕ್ಕಳಲ್ಲಿ ಉಂಟಾಗುವ ಅಪೌಷ್ಟಿಕತೆ ನಿವಾರಿಸುವಲ್ಲಿ ಮುತುವರ್ಜಿವಹಿಸಿ ಕೆಲಸ ಮಾಡುವ ಅಂಗನವಾಡಿ ನೌಕರರೇ ಇಂದು ಅಪೌಷ್ಟಿಕತೆಯಿಂದ ಬಳಲುವಂತಾಗಿದೆ. ಸರ್ಕಾರ ನೌಕರರ ಯೋಗಕ್ಷೇಮ ವಿಚಾರಿಸಬೇಕು. ಶ್ರಮ ತಕ್ಕ ಸಂಬಳ ನೀಡಬೇಕೆಂದು ಆಗ್ರಹಿಸಿದರು.
ಸಿಐಟಿಯುನ ತಾಲೂಕಾ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿ, ಮಹಿಳೆಯರ ಹಕ್ಕುಗಳನ್ನು ದಮನ ಮಾಡಲು ಬಂಡವಾಳಶಾಹಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಮಹಿಳೆಯರ ಮೇಲಿನ ದಾಳಿ, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕೆಲಸದಲ್ಲಿ ಕನಿಷ್ಠ ವೇತನ, ಭದ್ರತೆ ಸಿಗುತ್ತಿಲ್ಲ. ಇದರಿಂದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದ್ದು, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರು. ಮುಂಚಿತವಾಗಿ ನಗರದ ಪ್ರಮುಖ ಬೀದಿಗಳ ಮೂಲಕ ಟೌನ್ ಹಾಲ್‍ವರೆಗೆ ಬೃಹತ್ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಸುರೇಖಾ ಕುಲಕರ್ಣಿ, ತಾಲೂಕಾ ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ, ಕಾರ್ಯದರ್ಶಿ ಯಮುನಮ್ಮ, ವಡಿಗೇರ ತಾಲೂಕಾ ಅಧ್ಯಕ್ಷೆ ಇಂದಿರಾ ಕೊಂಕಲ್, ಯಾದಗಿರಿ ತಾಲೂಕಾ ಅಧ್ಯಕ್ಷ ಅನೀತಾ ಹಿರೇಮಠ್, ಖಜಾಂಚಿ ಕವಿತಾ, ಸುರಪುರ ತಾಲೂಕಾ ಅಧ್ಯಕ್ಷೆ ಬಸಮ್ಮ ಆಲಾಳ, ಖಜಂಚಿ ನಶಿಮಾ ಸೇರಿದಂತೆ ಅಕ್ಷರ ದಾಸೋಹ ನೌಕರ ಸಂಘದ ತಾಲೂಕಾ ಅಧ್ಯಕ್ಷ ಸುನಂದ ಹಿರೇಮಠ, ಕಾರ್ಯದರ್ಶಿ ಈರಮ್ಮ ಹೈಯಾಳಕರ್, ಖಜಂಚಿ ಮಂಜುಳ ಹೊಸಮನಿ, ಅರಣ್ಯ ಇಲಾಖೆ ನೌಕರ ಸಂಘದ ತಾಲೂಕ ಅಧ್ಯಕ್ಷ ಮಲಿರ್ಂಗಪ್ಪ ಮಕಾಶಿ, ಸುರಪುರ ಅಧ್ಯಕ್ಷ ದೂಲಾಸಾಬ್ ಇತರರಿದ್ದರು.