ಬರ್ತ್ & ಡೆತ್ ಸರ್ಟಿಫಿಕೇಟ್ ಹಿಡಿದು ಕಾಂಗ್ರೆಸ್ ನಲ್ಲಿ ಅಧಿಕಾರ ಹಿಡೀತಾರೆ – ನಟಿ ತಾರಾ
ಬೆಳಗಾವಿ : ಕಾಂಗ್ರೆಸ್ ಪಕ್ಷದಲ್ಲಿ ಬರ್ತ್ ಅಂಡ್ ಡೆತ್ ಸರ್ಟಿಫಿಕೇಟ್ ಆಧಾರದ ಮೇಲೆ ಅಧಿಕಾ ಹಿಡಿಯುತ್ತಾರೆ ಎಂದು ಬಿಜೆಪಿ ನಾಯಕಿ ಹಾಗೂ ನಟಿ ತಾರಾ ಹೇಳಿದ್ದಾರೆ. ನಗರದ ವಿಲೆನಿಯಮ್ ಗಾರ್ಡನ್ ನಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೆಹರು ಅವರಿಂದ ಬರ್ತ್ ಸರ್ಟಿಫಿಕೇಟ್ ಪಡೆದು ಇಂದಿರಾ ಗಾಂಧಿ ಪ್ರಧಾನಿ ಆಗಿದ್ದರು. ಇಂದಿರಾ ಗಾಂಧಿ ಅವರ ಡೆತ್ ಸರ್ಟಿಫಿಕೇಟ್ ಆಧಾರದ ಮೇಲೆ ರಾಜೀವ್ ಗಾಂಧಿ ಪ್ರಧಾನಿ ಆದರು. ರಾಜೀವ್ ಗಾಂಧಿ ಡೆತ್ ಸರ್ಟಿಫಿಕೇಟ್ ಪಡೆದು ಸೋನಿಯಾ ಗಾಂಧಿ ಎಐಸಿಸಿ ಅದ್ಯಕ್ಷೆಯಾಗಿ ಅಧಿಕಾರ ಹಿಡಿದರು. ಸೋನಿಯಾ ಗಾಂಧಿಯಿಂದ ಬರ್ತ್ ಸರ್ಟಿಫಿಕೇಟ್ ಪಡೆದು ರಾಹುಲ್ ಗಾಂಧಿ ಎಐಸಿಸಿ ಅದ್ಯಕ್ಷರಾಗಿದ್ದಾರೆ ಎಂದು ನಟಿ ತಾರಾ ವ್ಯಂಗವಾಡಿದ್ದಾರೆ.
ಕಾಂಗ್ರೆಸ್ ನಲ್ಲಿ ವಂಶಪಾರಪರ್ಯ ರಾಜಕಾರಣವಿದೆ. ಗಾಂಧಿ ಮನೆತನದವರೇ ಕಾಂಗ್ರೆಸ್ ನಲ್ಲಿ ಅಧಿಕಾರ ಹಿಡಿಯುವುದು ಎಂದು ಆರೋಪಿಸಿದ ನಟಿ ತಾರಾ ಸಾಮಾನ್ಯ ವ್ಯಕ್ತಿಯು ಭಾರತದ ಪ್ರಧಾನ ಮಂತ್ರಿ ಆಗಬಹುದು ಎಂಬುದನ್ನು ಬಿಜೆಪಿ ಮಾತ್ರ ತೋರಿಸಿಕೊಟ್ಟಿದೆ ಎಂದು ನುಡಿದರು. ನಟಿ ತಾರಾ ಹೇಳಿಕೆಗೆ ಕಾಂಗ್ರೆಸ್ ನಾಯಕರು ಯಾವ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.