ಕಸಾಪ ಸಾರಥ್ಯಕ್ಕಾಗಿ ಚುನಾವಣೆಗೆ ಇಳಿದಿದ್ದ ಮಾಯಣ್ಣ ACB ಬಲೆಗೆ, ಈತನ ಬೇನಾಮಿ ಆಸ್ತಿ ಎಷ್ಟಿದೆ ಗೊತ್ತಾ.?

ಕಸಾಪ ಸಾರಥ್ಯಕ್ಕಾಗಿ ಚುನಾವಣೆಗೆ ಇಳಿದಿದ್ದ ಮಾಯಣ್ಣ ACB ಬಲೆಗೆ, ಈತನ ಬೇನಾಮಿ ಆಸ್ತಿ ಎಷ್ಟಿದೆ ಗೊತ್ತಾ.?
ಮಾಯಣ್ಣನ ಕಾಣದ ಭ್ರಷ್ಟವತಾರ ಬಯಲಿಗೆ
ವಿವಿ ಡೆಸ್ಕ್ಃ ಇಂದು ರಾಜ್ಯದಾದ್ಯಂತ ಹಲವಡೆ ಎಸಿಬಿ ದಾಳಿ ನಡೆಸಿದ್ದು, ಅದರಲ್ಲಿ ಮೊನ್ನೆ ಕಸಾಪ ರಾಜ್ಯಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾಯಣ್ಣ ಅಕ್ರಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸುಮಾರು 65 ಕೋಟಿ ರೂ.ಆಸ್ತಿ ಮಾಡಿರುವದು ಬೆಳಕಿಗೆ ಬಂದಿದೆ.
ಮಾಯಣ್ಣ ಬಿಬಿಎಂಪಿ ಯಲ್ಲಿ ಕೇವಲ ಎಫ್‌ಡಿಎ ಹುದ್ದೆಯಲ್ಲಿದ್ದು ಕೋಟಿಗಟ್ಟಲೇ ದುಡ್ಡು ಮಾಡಿರುವದೇ ಈತ ಅಕ್ರಮವಾಗಿ ಹಣ ಗಳಿಕೆಯಲ್ಲಿ ತೊಡಗಿಸಿಕೊಂಡಿರುವದು ಕಂಡು ಬಂದಿದೆ. ಸಮರ್ಪಕ ಮಾಹಿತಿ ದೊರೆತ ಹಿನ್ನೆಲೆ ಎಸಿಬಿ ಅಧಿಕಾರಿಗಳು ಮಾಯಣ್ಣನ ಮನೆ ಆಫೀಸ್ ಅವರ ಸಂಬಂಧಿಗಳ ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ವೇಳೆ ಮಾಯಣ್ಣನ ಬಳಿ ಕಂತು ಕಂತುಗಟ್ಟಲೇ ಹಣ ಸೇರಿದಂತೆ ಅಪಾರವಾದ ಚಿನ್ನ, ಬೆಳ್ಳಿ ಅಲ್ಲದೆ ವಜ್ರದುಂಗುರಗಳು ಸಹ ದೊರೆತಿದೆ. ಅಲ್ಲದೆ ಅವರ ಸಹೋದರ, ಸಹೋದರಿ ಸೇರಿದಂತೆ ಸಂಬಂಧಿಕರ ಹೆಸರಲ್ಲಿ ಸಾಕಷ್ಟು ಆಸ್ತಿ, ಹಣ ಮಾಡಿದ್ದಾನೆ ಎಂಬ ಮಾಹಿತಿ ದೊರೆತಿದೆ. ಅಪಾರ ಭ್ರಷ್ಟಾಚಾರ ದಲ್ಲಿ ಮುಳುಗಿದ್ದ ಈತ ಪ್ರಮೋಷನ್ ಸಹ ಬೇಡವೆನ್ನುತ್ತಿದ್ದ ಎನ್ನಲಾಗಿದೆ.
ಎಫ್‌ಡಿಎ ಹುದ್ದೆ ಯಿಂದ ಪ್ರಮೋಷನ್ ಆಗಿ ಮೆಲ್ದರ್ಜೆಗೆ ಹುದ್ದೆಗೆ ಹೋದರೆ ಈ ಪರಿ ಹಣ ದೊರೆಯಲ್ಲ ಎಂಬ ಕಾರಣಕ್ಕೆ ಆತ ಸರ್ಕಾರ ನೀಡುವ ಪ್ರಮೋಷನ್ ಯಾವನಿಗೆ ಬೇಕು ಎನ್ನುವ ಧಾಟಿಯಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ.
ಕೋಟ್ಯಂತರ ಆಸ್ತಿ, ಹಣ ಸಂಪಾದನೆ ಮಾಡಿದ ಈ ಭ್ರಷ್ಟ ಕುಳವನ್ನು ಎಸಿಬಿ ಬೆನ್ನಟ್ಟಿದ್ದು, ಛಳಿ ಬಿಡಿಸಲಿದೆ ಎನ್ನಲಾಗಿದೆ. ಒಟ್ಟು ಇಂದ ರಾಜ್ಯದ 60 ಕಡೆ ಎಸಿಬಿ ದಾಳಿನಡೆಸಿದೆ. ಭ್ರಷ್ಟ ಕುಳಗಳಿಗೆ ಬಿಸಿ ಮುಟ್ಟಿಸಿದೆ.