ಪ್ರಮುಖ ಸುದ್ದಿ
ಪೊಲೀಸರ ನಿರ್ಲಕ್ಷದಿಂದ ಅಪಘಾತ ಸ್ಥಳದಲ್ಲೇ ಮತ್ತೊಂದು ಭೀಕರ ಅಪಘಾತ!
ಚಿತ್ರದುರ್ಗ : ಪೊಲೀಸರ ನಿರ್ಲಕ್ಷದಿಂದಾಗಿ ಕುಂಚಿಗನಾಳು ಬಳಿ ಮತ್ತೊಂದು ಅಪಘಾತ ಸಂಭವಿಸಿದ್ದು ಓರ್ವ ಸಾವಿಗೀಡಾಗಿದ್ದು ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ನಿನ್ನೆ ಇದೇ ಸ್ಥಳದಲ್ಲಿ ಕಾರು, ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಐವರು ಸಾವಿಗೀಡಾಗಿದ್ದರು. ಪೊಲೀಸರು ಅಪಘಾತಕ್ಕೀಡಾದ ಲಾರಿ ಸ್ಥಳಾಂತರಿಸದೆ ಹೆದ್ದಾರಿಯ ಬದಿಯಲ್ಲೇ ಬಿಟ್ಟಿದ್ದ ಪರಿಣಾಮ ಅಪಘಾತವಾಗಿ ನಿಂತಿದ್ದ ಲಾರಿಗೆ ಇಂದು ಚಾಲಕನ ನಿಯಂತ್ರಣ ತಪ್ಪಿ ಕಾರು ಡಿಕ್ಕಿ ಹೊಡೆದಿದ್ದು ದುರಂತ ಸಂಭವಿಸಿದೆ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಕಾರಲ್ಲಿದ್ದ ಹುಬ್ಬಳ್ಳಿ ಮೂಲದ ಅರುಣ್(25)ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನುಳಿದ ಮೂವರು ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.