ಕಲ್ಬುರ್ಗಿಃ BJP ಯ BG ಪಾಟೀಲ್‌ಗೆ ಗೆಲುವು
ಕಲ್ಬುರ್ಗಿಯಲ್ಲಿ ಮತ್ತೆ ಅರಳಿದ ಕಮಲ
ಕಲ್ಬುರ್ಗಿಃ ಕಲ್ಬುರ್ಗಿ ಮತ್ತು ಯಾದಗಿರಿ ವಿಧಾನ ಪರಿಷತ್ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದೆ.
ಬಿಜೆಪಿಯ ಬಿ.ಜಿ.ಪಾಟೀಲ್ ಸತತವಾಗಿ ಎರಡನೇ ಬಾರಿಗೆ ಪರಿಷತ್ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಮರತೂರ ಇವರನ್ನು 186 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಬಿಜೆಪಿ- 3453, ಕಾಂಗ್ರೆಸ್ – 3267, ಲೀಡ್ 186 ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿದೆ. ಒಟ್ಟು ಮತದಾನದಲ್ಲಿ 259 ಮತಗಳು ಕೆಟ್ಟಿವೆ.