ಕ್ರೀಡೆ ದೈಹಿಕ ಮಾನಸಿಕ ಸಮತೋಲನಕ್ಕೆ ಪೂರಕ
ದೇಶಿ ಕ್ರೀಡೆ ನಶಸಿಸುತ್ತಿವೆ ವಕೀಲ ಹೊನ್ನಾರಡ್ಡಿ ವಿಷಾಧ
ಯಾದಗಿರಿ, ಶಹಾಪುರಃ ಇತ್ತೀಚಿನ ದಿನಗಳಲ್ಲಿ ದೇಶಿಯ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಆದರೆ ಕ್ರೀಡೆ ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಪೂರಕವಾಗಿದ್ದು, ವಿದ್ಯಾರ್ಥಿಗಳು ವಿವಿಧ ಆಸಕ್ತ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ವಕೀಲರಾದ ಹೊನ್ನರಡ್ಡಿಯವರು ತಿಳಿಸಿದರು.
ನಗರದ ಚಿಂತಮ್ಮಗೌಡತಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ಆವರಣದಲ್ಲಿ ನೆಹರು ಯುವ ಕೇಂದ್ರ ಕಲಬುರಗಿ, ಯಾದಗಿರಿ ಹಾಗೂ ಸ್ವಾಮಿ ವಿವೇಕಾಂದ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನ ಸರ್ವತೋಮುಖ ವಿಕಾಸಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ. ಆಯಾ ವಯೋಮಾನದ ಅನುಗುಣವಾಗಿ ಕ್ರೀಡೆಯಲ್ಲಿ ಭಾವಹಿಸುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಯೋಗಗುರು ನರಸಿಂಹ ವೈದ್ಯ ಮಾತನಾಡಿ, ಇಂದಿನ ಯುವಕರು-ಯವತಿಯರು ಕೇವಲ ಮೊಬೈಲ್‍ನಲ್ಲಿ ವಾಟ್ಸ್‍ಪ್, ಫೇಸಬುಕ್, ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಾ, ದೇಶಿಯ ಕ್ರೀಡೆಗಳಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಉತ್ತಮ ಆರೋಗ್ಯ ತಂದುಕೊಡುವ ದೇಶಿ ಕ್ರೀಡೆಗಳು ನಶಿಸಿ ಹೋಗುತ್ತಿವೆ.
ಇಂತಹ ಸಂಧರ್ಭದಲ್ಲಿ ಸ್ವಾಮಿ ವಿವೇಕಾನಂದ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ನಡೆಸುತ್ತಿರುವ ಕ್ರೀಡಾಕೂಟ ಶ್ಲಾಘನೀಯವಾಗಿದೆ ಎಂದರು. ಪ್ರಾಂಶುಪಾಲ ಮಲ್ಲಿಕಾರ್ಜುನ ಆವಂಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸಂತೋಷ ಹಿರೇಮಠ, ಸಾಂಸ್ಕøತಿಕ ಸಂಘಟಕರಾದ ಮಹಾಂತೇಶ ಗಿಂಡಿ ವೇದಿಕೆಯ ಮೇಲಿದ್ದರು. ಇದೇ ಸಂದರ್ಭದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟು ವಿಜೇತರಿಗೆ ಸಂಸ್ಥೆ ವತಿಯಿಂದ ಸೂಕ್ತ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೆಂಕಟೇಶ ಕುಲಕರ್ಣಿ, ರಾಜು ಬಾಣತಿಹಾಳ, ಪವನಕುಮಾರ ಶಿರವಾಳ, ಅಂಬು ದೋರನಹಳ್ಳಿ, ವೆಂಕಟೇಶ ಟೊಣಪೆ, ಪ್ರಶಾಂತ ಲೋಹಾರ್, ಶಿವರಾಜ ಜಂಗಳಿ, ಸಂದೀಪ ಹೊಸಕೇರಿ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉದ್ದರು.