ಪ್ರಮುಖ ಸುದ್ದಿ
ವಿದ್ಯುತ್ ಅವಘಡ : ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ
ಕೋಲಾರ : ವಿದ್ಯುತ್ ಕಾಮಗಾರಿ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ ಪರಿಣಾಮ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ
ಮುಳಬಾಗಿಲು ತಾಲ್ಲೂಕಿನ ವಿರುಪಾಕ್ಷಿ ಗ್ರಾಮದ ಸಮೀಪ ನಡೆದಿದೆ. ಆಂದ್ರಪ್ರದೇಶ ಮೂಲದ ಕಾರ್ಮಿಕರಾದ ರಾಜಬಾಬು (35) ಹಾಗೂ ಚಿನ್ನಿಬಾಬು (28) ಮೃತ ಕಾರ್ಮಿಕರು ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣೆಯ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರವಾದ ಕಾರಣವೇನೆಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.