ಪ್ರಮುಖ ಸುದ್ದಿ
ಯಡಿಯೂರಪ್ಪ ಗುಂಬಜಗೆ ಭೇಟಿ ನೀಡಿದ್ದಾಗ, ಟಿಪ್ಪು ಕುರಿತು ಹೊಗಳಿದ್ರು- ಸಿದ್ದು
ಮಂಡ್ಯಃ ಬಿಎಸ್ ವೈ ಕೆಜಿಪಿಯಲ್ಲಿದ್ದಾಗ ಟಿಪ್ಪು ಓರ್ವ ಮತಾಂಧ ಎಂಬುದು ತಿಳಿದಿರಲಿಲ್ಲವೇ. ಆಗ ಟಿಪ್ಪು ಜಯಂತಿ ಆಚರಣೆಯಲ್ಲಿ ಭಾಗವಹಿಸಿದ ಯಡಿಯೂರಪ್ಪ ಇದೀಗ ಅಧಿಕಾರಕ್ಕೆ ಬಂದ ಮೇಲೆ ಟಿಪ್ಪಿ ಮತಾಂಧ ಎಂಬುದು ತಿಳಿದು ಬಂದಂತಿದೆ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಸಿಎಂ ಯಡಿಯೂರಪ್ಪನವರ ವಿರುದ್ಧ ಟೀಕಿಸಿದರು.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಈ ಹಿಂದೆ ಶ್ರೀರಂಗಪಟ್ಟಣದ ಗುಂಬಜಗೆ ಭೇಟಿ ನೀಡಿದ್ದ ಯಡಿಯೂರಪ್ಪ ಅಲ್ಲಿನ ಸಂದರ್ಶನ ಪುಸ್ತಕದಲ್ಲಿ ಟಿಪ್ಪು ಸಾಹಸದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಉಲ್ಲೇಖಿಸಿದ್ದಾರೆ ಆಗ ಟಿಪ್ಪು ಆದರ್ಶ ವ್ಯಕ್ತಿ ಈಗ ಮತಾಂಧ, ದರೋಡೆ ಕೋರ ಎಂಬಂತೆ ಸಿಎಂ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿದ್ರಾಮಯ್ಯ ಜರಿದಿದ್ದಾರೆ.