ಪ್ರಮುಖ ಸುದ್ದಿ
ಕೊರೊನಾಃ ಮದುವೆ ಸ್ಟಾಪ್ ಮಾಡಿಸಿ ಪಾಲಕರ ಮೇಲೆ ಕೇಸ್ ದಾಖಲಿಸಿದ ಪೊಲೀಸರು
ನವದೆಹಲಿಃ ದೇಶದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಭೆ, ಸಮಾರಂಭ, ಮದುವೆಯಂತಹ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿತ್ತು. ಸರ್ಕಾರ ಯಾವುದೇ ಸಭೆ, ಸಮಾರಂಭ ನಡೆಸದಂತೆ ಆದೇಶ ಹೊರಡಿಸಿತ್ತು.
ಆದಾಗ್ಯೂ ಮಹಾರಾಷ್ಟ್ರದ ಬೀಡ್ ಜಿಲ್ಲೆ ಬ್ರಮ್ಹಗಾನ್ ನಲ್ಲಿ ಗುರುವಾರ ಮದುವೆ ಸಮಾರಂಭ ನಡೆದಿತ್ತು. ಮದುವೆಯಲ್ಲಿ ವಧುವರರನ್ನು ಆಶೀರ್ವದಿಸಲು ಸಾಕಷ್ಟು ಜನರು ಸೇರಿದ್ದರು.
ವಿಷಯ ತಿಳಿದ ಪೊಲೀಸರು ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿ ಮದುವೆ ಆಯೋಜನೆ ಮಾಡಿದ್ದ ಪೋಷಕರ ಮೇಲೆ ಕೇಸ್ ದಾಖಲಿಕಸಿದರು.
ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಸಭೆ ಸಮಾರಂಭ ನಡೆಸುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಅದರನ್ವಯ ಮದುವೆ ತಯ್ಯಾರಿ ಮಾಡಿದ್ದ ಪಾಲಕರ ಮೇಲೆ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.