ರೇಷನ್-ಆಧಾರ್ ಲಿಂಕಿಂಗ್ ಅವಧಿ ಮತ್ತೆ ವಿಸ್ತರಣೆ

(ration aadhar link) ರೇಷನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡುವ ದಿನಾಂಕವನ್ನು ಇದೀಗ ವಿಸ್ತರಿಸಿದ್ದು, ಇದರಿಂದ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಂತಾಗಿದೆ. ಹೌದು, ಪಡಿತರ ಚೀಟಿ ಜೊತೆ ಆಧಾರ್ ಕಾರ್ಡ್ ಜೋಡಣೆ ದಿನಾಂಕವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ ಮಾಡಿದೆ. ಹಾಗಾದರೆ ರೇಷನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡುವುದು ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಹೇಗೆ?:
ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ರಾಜ್ಯದ ನಾನಾ ಜಿಲ್ಲಾ ಕೇಂದ್ರಗಳಲ್ಲಿರುವ ಮುಂತಾದ ಸೇವಾ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಡಲಾಗುತ್ತದೆ. ಇನ್ನು ಆನ್ ಲೈನ್ ಮೂಲಕವೇ ನೀವು ಮಾಡಬಹುದಾಗಿದೆ. ಈ ಕುರಿತು ಇಲ್ಲಿದೆ ಡಿಟೈಲ್ಸ್.
ಕರ್ನಾಟಕ ಆಹಾರ ಇಲಾಖೆ ವೆಬ್ ಸೈಟ್ ನಲ್ಲಿಯೂ ಲಿಂಕ್ ಮಾಡಲು ಅವಕಾಶ:
* ಆಹಾರ ಇಲಾಖೆಯ ವೆಬ್ ಸೈಟ್ ಗೆ ತೆರಳಿ. (https://ahara.kar.nic.in/Home/EServices)
* ಇ – ಸೇವೆಗಳನ್ನು ಆಯ್ಕೆ ಮಾಡಿ.
* ಆನಂತರ ಅಲ್ಲಿ ಯುಐಡಿ ಲಿಂಕ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
* ಹೊಸ ಪುಟ ತೆರೆದುಕೊಳ್ಳುತ್ತದೆ ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು UID linking for RC members ಅನ್ನು ಕ್ಲಿಕ್ ಮಾಡಿ GO ಎಂಬ ಬಟನ್ ಕ್ಲಿಕ್ ಮಾಡಿದರೆ, ಮತ್ತೊಂದು ಹೊಸ ವೆಬ್ ಪುಟ ತೆರೆದುಕೊಳ್ಳುತ್ತದೆ.
* ಅಲ್ಲಿ ನೀಡಲಾಗಿರುವ ನಿಗದಿತ ಜಾಗದಲ್ಲಿ ಆಧಾರ್ ಸಂಖ್ಯೆ ನಮೂದಿಸಿ GO ಬಟನ್ ಕ್ಲಿಕ್ ಮಾಡಿ.
* ನಿಮ್ಮ ಮೊಬೈಲ್ ಒನ್ ಟೈಂ ಪಾಸ್ ವರ್ಡ್ (OTP) ಬರುತ್ತದೆ. ಅದನ್ನು ನಮೂದಿಸಿ ಅಲ್ಲೇ ಇರುವ GO ಬಟನ್ ಒತ್ತಿ.
* ಆನಂತರ ಓಪನ್ ಆಗುವ ಮತ್ತೊಂದು ಪುಟದಲ್ಲಿ ನಿಮ್ಮ ಪಡಿತರ ಚೀಟಿಯ ಸಂಖ್ಯೆಯನ್ನು ನಮೂದಿಸಲು ಕೇಳಲಾಗುತ್ತದೆ.
* ಅಲ್ಲಿ, RC ನಂಬರ್ ಎಂಟರ್ ಎಂದು ಇರುವ ಕಡೆ ಪಡಿತರ ಚೀಟಿಯ ನಂಬರ್ ಹಾಕಬೇಕು.
* ನಂತರ ಮುಂದೆ ಇರುವ GO ಬಟನ್ ಒತ್ತಿದರೆ ಪಡಿತರ ಕಾರ್ಡ್ ನಲ್ಲಿ ನಮೂದಿಸಲಾಗಿರುವ ಕುಟುಂಬದ ಮುಖ್ಯಸ್ಥರ ಮೊಬೈಲಿಗೆ ನೋಟಿಫಿಕೇಷನ್ ಬರುತ್ತದೆ.
* ಅದರಲ್ಲಿ ಪಡಿತರ ಚೀಟಿಗೆ ಆಧಾರ ಲಿಂಕ್ ಮಾಡುವ ಪ್ರಕ್ರಿಯೆಯನ್ನು ನೀವು ಮುಗಿಸಿರುವುದಾಗಿ ತಿಳಿಸಲಾಗಿರುತ್ತದೆ. ಇಷ್ಟು ಮಾಡಿದರೆ ನಿಮ್ಮ ಪಡಿತರ ಚೀಟಿ ಕಾರ್ಡ್, ಆಧಾರ್ ಗೆ ಲಿಂಕ್ ಆಗುತ್ತದೆ.