ಕಾವ್ಯ
ಮನದಲ್ಲಿ ಮಲಗಿದ್ದ ನನ್ನ ಬಿಸಾಕಲು ಬಂತೇಗೆ ಮನಸ್ಸು..
ನಿನ್ನ ಮನಸ್ಸಲ್ಲಿ ಮಲಗೋವಾಸೆ..
ಅಂದು ನನ್ನ ಮಡಿಲಲಿ ಮಲಗಿ
ಪ್ರೀತಿ ಮಾತುಗಳನ್ನು ಆಡುತಾ,
ಎಂದಿಗೂ ಬಿಟ್ಟಿರದ ಭರವಸೆ ನೀಡಿದಿ.
ಇಂದು ಅದನ್ನೆಲ್ಲ ಮರೆತು
ಬೇರೊಬ್ಬನ ಪ್ರೀತಿಯ ಒಡಲು ಸೇರಿದಿ.
ನನ್ಬಿಟ್ಟು ಮತ್ತೊಬ್ಬನ ಪ್ರೀತಿಗೆ ಮರಳಾದಿ ಅದ್ಹೇಗೆ.?
ನನಗೆ ನೀ ಮಾಡಿದ ಮುದ್ದು, ನೀಡಿದ ಪ್ರೀತಿ,
ಬದುಕುವ ಆಶಯ ಮಾತುಗಳಿಂದ ಹೊರಬರಲು ಅಸಾಧ್ಯ.?
ಕನಸಲು ಬಂದು ಕಾಡೋವಾಸೆ,
ನಿನ್ನ ಮನಸ್ಸಲ್ಲಿ ಬಂದು ಮಲಗೋವಾಸೆ,
ಹೀಗೆ ಹಳೆಯ ನೆನಪು, ಆಸೆ ಮೂಡಿದಾಗಲೆಲ್ಲ ನಿರಾಸೆ,
ಹೇಳೆ.. ಪ್ರೇಯಸಿ, ಯಾಕೆ ಹೋದೆ ನೀ ನನ್ನ ವಂಚಿಸಿ.
ನಾ ಬೇಡವಾದನೆ ನೀನಗೀಗ,
ಅದ್ಯಾವ ಕಾರಣಕೆ ನೀ ನನ್ನಿಂದ ದೂರವಾದೆ,
ನಾ ಸಾಯುವ ಮುನ್ನ ಅದನ್ನೊಮ್ಮೆ
ಪ್ರಾಮಾಣಿಕವಾಗಿ ತಿಳಿಸಿ ಬಿಡಲೇ ಕೋತಿ..
-ಚಕ್ರಿ ದಾದಾ.