ಪ್ರಮುಖ ಸುದ್ದಿ
ಮಂತ್ರಾಲಯದಲ್ಲಿ ಸುಸಜ್ಜಿತ ಸ್ನಾನ ಘಟ್ಟ ನಿರ್ಮಾಣ
ರಾಯಚೂರಃ ಸಮೀಪದ ಸುಕ್ಷೇತ್ರ ಮಂತ್ರಾಲಯದ ತುಂಗಾಭದ್ರ ನದಿ ದಂಡೆಯಲ್ಲಿ 13 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಸ್ನಾನ ಘಟ್ಟ ನಿರ್ಮಾಣ ಮಾಡಲಾಗುತ್ತಿದೆ ಎಂದು ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾದಿಪತಿ ಶ್ರೀಸುಬುದೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ಇಂದು ತುಂಗಾಭದ್ರ ಪುಷ್ಕರ ಪೂಜೆ ನೆರವೇರಿಸುವ ಮುಂಚೆ ನದಿ ತೀರದಲ್ಲಿ ನೀಡಿದ ಅನುಗ್ರಹ ಸಂದೇಶದಲ್ಲಿ ಅವರು ವಿಷಯ ತಿಳಿಸಿದರು.
ಅಲ್ಲದೆ ಸ್ನಾನ ಘಟ್ಟಕ್ಕೆ ಇನ್ಫೋಸಿಸ್ ಮುಖ್ಯಸ್ಥರಾದ ಸುಧಾಮೂರ್ತಿ ಹಾಗೂ ನಾರಾಯಾಣ ಮೂರ್ತಿ ದಂಪತಿ ಆರ್ಥಿಕ ನೆರವು ನೀಡುತ್ತಿದ್ದು, ಸುತ್ತಮುತ್ತ ಎಲ್ಲೂ ಕಾಣದಂತ ಅಚ್ವುಕಟ್ಟಿನ ಸ್ನಾನಘಟ್ಟ ಇದಾಗಲಿದೆ ಎಂದರು.
ಪುಷ್ಕರ ಧಾರ್ಮಿಕ ಕಾರ್ಯ ನಡೆಸುವ ಮುನ್ನವೇ ಕಾಮಗಾರಿ ಪೂರ್ಣ ಮಾಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಮಹಾಮಾರಿ ತೀವ್ರತೆ ಕಂಡು ಕಾಮಗಾರಿ ಆರಂಭಕ್ಕೆ ತಡೆಯಲಾಗಿತ್ತು. ಭಕ್ತ ಸಂಕುಲಕ್ಕೆ ಅನುಕೂಲವಾಗುವಂತ ಸ್ನಾಘಟ್ಟ ಇದಾಗಲಿದೆ ಎಂದು ವಿವರಿಸಿದರು.