ಆಕಸ್ಮಿಕ ಬೆಂಕಿ ಅವಘಡ ಬಣವೆ ಭಸ್ಮ
ಟೊಣ್ಣೂರು ಗ್ರಾಮದಲ್ಲಿ ಬೆಂಕಿ ಅವಘಡ – ಬಣವೆ ಭಸ್ಮ
ಶಹಾಪುರಃ ಶಾರ್ಟ್ ಸರ್ಕ್ಯೂಟ್ ನಿಂದಾಗಿ ರೈತ ಸಂಗ್ರಹಿಸಿಟ್ಟಿದ ಮೇವಿನ ಬಣವೆಗೆ ಬೆಂಕಿ ಹೊತ್ತಿ ಉರಿದ ಪರಿಣಾಮ ಬಣವೆ ಪೂರ್ಣ ಭಸ್ಮವಾದ ಘಟನೆ ಸೋಮವಾರ ತಾಲ್ಲೂಕಿನ ಕೊಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಟೊಣ್ಣೂರು ಗ್ರಾಮದಲ್ಲಿ ನಡೆದಿದೆ.
ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಜೋರಾಗಿ ಬೀಸುತ್ತಿದ್ದ ಗಾಳಿಗೆ ಇದ್ಯುತ್ ಮೇನ್ ವೈರ್ ಗಳ ಸ್ಪರ್ಶದಿಂದ ಉಂಟಾದ ವಿದ್ಯುತ್ ಸ್ಪಾರ್ಕ್ ನಿಂದಾಗಿ ಬಣವೆಗೆ ಬೆಂಕಿ ತಗುಲಿದೆ ಎಂದು ಹೇಳಲಾಗುತ್ತಿದೆ.
ಮೊದಲೇ ಬರಗಾಲದ ಛಾಯೆಯಲ್ಲಿ ಬೆಂದು ಹೋಗಿದ್ದ ರೈತನಿಗೆ ಜಾನುವಾರುಗಳಿಗಾಗಿ ಸಂಗ್ರಹಿಸಲಾಗಿದ್ದ ಮೇವಿನ ಬಣವೆ ಬೆಂಕಿಗೆ ಆಹುತಿಯಾಗಿರುವದು ತುಂಬಲಾರದ ನಷ್ಟವೆನಿಸಿದೆ.
ಬೆಂಕಿ ಹೊತ್ತಿದ್ದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿ ಶಾಮಕದಳದವರಿಗೆ ಕರೆ ಮಾಡಿದ್ದಾರೆ. ಸಮೀಪದ ದೇವದುರ್ಗದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹೆಚ್ಚಿನ ಅನಾಹುತಾವನ್ನು ತಪ್ಪಿಸಿದ್ದಾರೆ ಎನ್ನಲಾಗಿದೆ.
ಗ್ರಾಮದ ರೈತ ಖಾಸಿಂಸಾಬ್ ಎಂಬುವರಿಗೆ ಸೇರಿದ ಬಣವೆ ಇದಾಗಿದ್ದು ಈ ಕುರಿತು ಗ್ರಾಮಲೆಖ್ಖಾಧಿಕಾರಿಗೆ ವಿವರ ನೀಡಲಾಗಿದೆ ಎಂದು
ತಾಲೂಕು ರೈತ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ನಾಯಕ ವಿನಯವಾಣಿಗೆ ತಿಳಿಸಿದ್ದಾರೆ.