ಪ್ರಮುಖ ಸುದ್ದಿ
ಡಿಕೆಶಿ ತಮ್ಮ ಶಾಸಕರನ್ನು ಕಾಯಲು ಹೋಗಿದ್ರೂ – ಬಿಎಸ್ ವೈ
ಎಲ್ಲಡೆ ನೆಲ ಕಚ್ಚಿದ ಕಾಂಗ್ರೆಸ್ ಗೆ ಭವಿಷ್ಯವಿಲ್ಲ - BSY
ಡಿಕೆಶಿ ತಮ್ಮ ಶಾಸಕರನ್ನು ಕಾಯಲು ಹೋಗಿದ್ರೂ – ಬಿಎಸ್ ವೈ
ಕಾಂಗ್ರೆಸ್ ಗೆ ಮುಂದೆ ಭವಿಷ್ಯ ಇಲ್ಲ – ಬಿಎಸ್ ವೈ
ವಿವಿ ಡೆಸ್ಕ್ಃ ಪಂಚರಾಜ್ಯಗಳಲ್ಲಿ ಪಂಜಾಬ್ ಹೊರತು ಪಡಿಸಿ ಬಿಜೆಪಿ ಎಲ್ಲಡೆ ಅಭೂತಪೂರ್ವ ಜಯ ಸಾಧಿಸಿದೆ. ಗೆಲುವು ತಂದು ಕೊಟ್ಟ ಅಲ್ಲಿನ ಕಾರ್ಯಕರ್ತರಿಗೂ ಮತದಾರರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.
ಗೆಲುವಿಗೆ ಮೋದಿಯವರು ಜಾರಿಗೊಳಿಸಿದ ರೈತಪರ, ಮಹಿಳಾ ಸಬಲೀಕರಣ, ಕಿಸಾನ್ ಸಮ್ಮಾನ್, ಸಿಲಿಂಡರ್ ವಿತರಣೆ, ಬೆಳಕು, ಜಲ ಯೋಜನೆ ಸಾಕಷ್ಟು ಜನಪರ ಕೆಲಸ ಮೋದಿಯವರ ವರ್ಚಸ್ಸು ಅಭಿವೃದ್ಧಿ ಮಂತ್ರವೆ ನಮಗೆ ಗೆಲುವು ತಂದು ಕೊಟ್ಟಿದೆ.
ಅಲ್ಲದೆ ಪಂಚರಾಜ್ಯ ಚುನಾವಣೆ ಫಲಿತಾಂಶ ಮುಂಬರುವ ಚುನಾವಣೆಗಳಿಗೆ ದಿಕ್ಸೂಚಿ ಯಾಗಲಿದೆ ಎಂದರು. ಗೋವಾ ಕ್ಕೆ ತೆರಳಿದ್ದ ಡಿಕೆಶಿ ಅವರ ಶಾಸಕರನ್ನು ತಡೆ ಹಿಡಿಯಲು ಹೋಗಿದ್ರು ಇಂತಹ ಸ್ಥಿತಿಗೆ ಕಾಂಗ್ರೆಸ್ ತಲುಪಿದ್ದು, ಬರಿ ಕೈಯಿಂದ ವಾಪಸ್ ಹೊರಟಿದ್ದಾರೆ ಎಂದರು.