ನೆಲನೆಲ್ಲಿಯ ಗಿಡದ ಬಗ್ಗೆ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

ನಮ್ಮೆಲ್ಲಾ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳಿಂದ ಹಿಡಿದು ದೊಡ್ಡ ದೊಡ್ಡ ಅನಾರೋಗ್ಯಕ್ಕೂ ಆಯುರ್ವೇದದಲ್ಲಿ ಮದ್ದಿದೆ ಎಂಬುದು ನಮಗೆ ತಿಳಿದಿದೆ. ಆದರೆ ಆರ್ಯುವೇದಕ್ಕೂ ಮುನ್ನ ನಮ್ಮ ಮನೆಯಲ್ಲೇ ಒಂದಿಷ್ಟು ಮದ್ದು ಸಿಗುತ್ತದೆ. ಆದರೆ ಈ ಕುರಿತು ನಮಗೆ ಅರಿವಿಲ್ಲದ ಕಾರಣ ಆ ಗಿಡಗಳು, ಸಸ್ಯಗಳ ಆರೋಗ್ಯಕರ ಲಾಭಗಳ ನಾವು ಪಡೆಯುವುದೇ ಇಲ್ಲ.
ಇಂತಹ ಗಿಡಗಳ ಸಾಲಿನಲ್ಲಿ ನೆಲನೆಲ್ಲಿ ಕುರಿತು ನಾವಿಂದು ತಿಳಿದುಕೊಳ್ಳೋಣ. ನೀವು ನೆಲನೆಲ್ಲಿ ಹೆಸರು ಕೇಳಿರಬಹುದು. ಮನೆಮದ್ದು ಹಾಗೂ ಆರ್ಯುವೇದದಲ್ಲಿ ನೆಲನೆಲ್ಲಿಗೆ ತನ್ನದೇ ಆದ ಮಹತ್ವವಿದೆ. ನೀವು ಎಲ್ಲಿಯಾದರು ನೆಲನೆಲ್ಲಿ ನೋಡಿದರೆ ಅದನ್ನು ರಕ್ಷಿಸುವ ಕಡೆ ಗಮನ ನೀಡಿ. ನೆಲದಿಂದ ಕೆಲವೇ ಅಡಿ ಎತ್ತರಕ್ಕೆ ಈ ಗಿಡ ಬೆಳೆಯುತ್ತದೆ.
ಅಚ್ಚರಿ ಅಂದರೆ ಈ ಗಿಡದ ಎಲೆಗಳ ಬಳಿ ಚಿಕ್ಕ ಚಿಕ್ಕ ಗಾತ್ರ ಕಾಯಿಗಳು ಸಹ ಬಿಡುತ್ತವೆ. ಇದು ಎಷ್ಟು ಚಿಕ್ಕದಾಗಿರುತ್ತೆ ಅಂದರೆ ಸಾಸಿವೆಗಿಂತ ಸ್ವಲ್ಪ ದೊಡ್ಡದಾಗಿರಬಹುದು ಅಷ್ಟೆ. ಆದರೆ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಮಾತಿಗೆ ಈ ನೆಲನೆಲ್ಲಿ ಉದಾಹರಣೆಯಾಗಿ ನೀಡಬಹುದು. ಹೌದು ಈ ನೆಲನೆಲ್ಲಿ ಎಂಬುದು ಹತ್ತು ಹಲವು ಅನಾರೋಗ್ಯ ಸಮಸ್ಯೆಗಳ ನಿವಾರಿಸುವ ಸಂಜೀವಿನಿಯಾಗಿದೆ. ಆದರೆ ನಾವಿದಂನ್ನು ಕಡೆಗಣಿಸಿ ಇನ್ನಿಲ್ಲದ ಪ್ರಯತ್ನ ಮಾಡಿರುತ್ತೇವೆ. ಹಾಗಾದ್ರೆ ಈ ನೆಲನೆಲ್ಲಿ ಯಾವೆಲ್ಲಾ ಅನಾರೋಗ್ಯ ಸಮಸ್ಯೆಗಳ ಗುಣಪಡಿಸುವ ಅಂಶ ತನ್ನಲ್ಲಿಟ್ಟುಕೊಂಡಿದೆ. ಯಾವ ಕಾಯಿಲೆಗೆ ಯಾವ ರೀತಿ ಇದನ್ನು ಬಳಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನೆಲನೆಲ್ಲಿ ಕಷಾಯ
ಮೊದಲು ಈ ನೆಲನೆಲ್ಲಿಯ ಕಷಾಯದ ಕುರಿತು ನಾವು ತಿಳಿದುಕೊಳ್ಳೋಣ. ನಾವು ಕೆಮ್ಮು, ಶೀತ, ಜ್ವರ ಸೇರಿ ಕೆಲವು ಚಿಕ್ಕಪುಟ್ಟ ಕಾಯಿಲೆಗೆ ಮೆಣಸಿನಕಾಳಿನ ಕಷಾಯ ಕುಡಿದಿರುತ್ತೇವೆ. ಅದೇ ರೀತಿ ಈ ನೆಲನೆಲ್ಲಿ ಕಷಾಯ ಸಹ ಈ ಸಣ್ಣ ಪುಟ್ಟ ಕಾಯಿಲೆಗೆ ರಾಮಬಾಣವಾಗಿದೆ.
ಮಾಡುವುದು ಹೇಗೆ: ನೆಲನೆಲ್ಲಿಯ ಎಲೆಗಳು, ಕಾಂಡವನ್ನು ಬಿಸಿ ನೀರಿಗೆ ಹಾಕಬೇಕು. ಇದಕ್ಕೆ ಒಂದು ಸಣ್ಣ ಪೀಸ್ ಶುಂಠಿ ಜಜ್ಜಿ ಅದಕ್ಕೆ ಸೇರಿಸಬೇಕು. ಬಳಿಕ ಕಾಳು ಮೆಣಸಿನಪುಡಿ, ಜೀರಿಗೆ ಹಾಕಿ ಸಣ್ಣದಾಗಿ ಕುದಿ ಬರಲು ಬಿಡಬೇಕು. ಇದಕ್ಕೆ ಒಂದು ಚಿಟಿಕೆ ಅರಶಿನ ಹಾಕಿ ಇಳಿಸಿಕೊಂಡರೆ ನಿಮ್ಮ ಮುಂದೆ ಕಷಾಯ ರೆಡಿಯಾಗಿರುತ್ತದೆ.
ಈ ನೆಲನೆಲ್ಲಿಯ ಎಲೆಗಳನ್ನು ಕತ್ತರಿಸಿ ಚೆನ್ನಾಗಿ ಬಿಸಿ ನೀರಿನಲ್ಲಿ ತೊಳೆದು ಬಳಿಕ ಅದನ್ನು ಜ್ಯೂಸ್ ಮಾಡಬೇಕು. ಇದಕ್ಕೆ ಚಿಟಿಕೆ ಅರಶಿನ, ಜೇನುತುಪ್ಪ ಹಾಕಿಕೊಂಡು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಅಲ್ಲದೆ ಈ ನೆಲನೆಲ್ಲಿ ಕಿಡ್ನಿ ಸಮಸ್ಯೆಗೆ ಪರಿಹಾರ ನೀಡಲಿದೆ. ಕಿಡ್ನಿಯಲ್ಲಿ ಕಲ್ಲಾಗುವುದು ಸೇರಿ ಹಲವು ಸಮಸ್ಯೆಗೆ ಪರಿಹಾರ ನೀಡಲಿದೆ.
ಮಕ್ಕಳಿಗೆ ಇದು ಸಂಜೀವಿನಿ ಚಿಕ್ಕಮಕ್ಕಳು ಯಾವಾಗಲು ಸಣ್ಣ ಪುಟ್ಟ ಕಾಯಿಲೆಗೆ ತುತ್ತಾಗುತ್ತಲೇ ಇರುತ್ತಾರೆ. ಕೆಮ್ಮು, ಶಿತ ಯಾವಾಗಲು ಮಕ್ಕಳನನ್ನು ಕಾಡುತ್ತಲೇ ಇರುತ್ತದೆ. ಇದಲ್ಲದೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಾಂಡೀಸ್, ಜ್ವರಕ್ಕೆ ಈ ನೆಲನೆಲ್ಲಿ ಮನೆಮದ್ದಾಗಿದೆ. ಮೊದಲೇ ಹೇಳಿದಂತೆ ಮಕ್ಕಳಿಗೂ ಇದರ ಕಷಾಯ ಮಾಡಿ ಕುಡಿಸಿದರೆ ಜಾಂಡೀಸ್‌ಗೆ ಒಳ್ಳೆಯ ಔಷಧಿ, ಆದರೆ ಮಕ್ಕಳಿಗೆ ಮಾಡುವಾಗ ಮೆಣಸಿನ ಪುಡಿ ಕಡಿಮೆ ಹಾಕಬೇಕು.
ಅಲ್ಲದೆ ಮಕ್ಕಳ ಮೈಯಲ್ಲಿ ಆಗುವ ಅಲರ್ಜಿ, ಗಾಯ, ಕಜ್ಜಿ, ತುರಿಕೆ ಹಾಗೂ ಜಂತುಹುಳುಗಳ ನಿವಾರಣೆಗೂ ಈ ನೆಲನೆಲ್ಲಿ ಸಿದ್ಧೌಷದ. ಸಾಮಾನ್ಯವಾಗಿ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗೂ ಇದನ್ನು ಬಳಸಬಹುದು. ಆದರೆ ಇದನ್ನು ಬಳಸುವ ಮುನ್ನ ಅಥವಾ ಬಳಸಿದ ನಂತರ ವೈದ್ಯರ ಸಂಪರ್ಕ ಹಾಗೂ ಸಲಹೆ ಪಡೆಯುವುದು ಮುಖ್ಯ.
Read more at: https://kannada.boldsky.com/health/health-benefits-of-gale-of-the-wind-uses-of-nelanelli-037995.html