ಪ್ರಮುಖ ಸುದ್ದಿ
ಕಾಲು ಜಾರಿ ಕಾಲುವೆಗೆ ಬಿದ್ದ ಬಾಲಕ ಸಾವು
ಶಹಾಪುರಃ ನೀರು ಕುಡಿಯಲೆಂದು ಕಾಲುವೆಯೊಂದಕ್ಕೆ ಇಳಿದ ಬಾಲಕ ಕಾಲು ಜಾರಿ ಕಾಲುವೆಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ದೋರನಳ್ಳಿ ಗ್ರಾಮದಲ್ಲಿ ನಡೆದಿದೆ.
ಮೌನೇಶ ತಂದೆ ಸಾಬಣ್ಣ(9) ಮೃತ ಪಟ್ಟ ದುರ್ದೈವಿಯಾಗಿದ್ದಾನೆ. ಎಂದಿನಂತೆ ತನ್ನ ತಂದೆಯೊಂದಿಗೆ ಕುರಿ ಮೇಯಿಸಲೆಂದು ಗ್ರಾಮದಿಂದ ಹೊರಟ್ಟಿದ ಸಾಬಣ್ಣ, ಟೊಕಾಪುರ ಸೀಮಾಂತರದಲ್ಲಿ ಮುಂದೆ ಕುರಿ ಹೊಡೆದುಕೊಂಡು ಸಾಗುತ್ತಿರುವ ವೇಳೆ, ಮಗ ನೀರು ಕುಡಿಯಲೆಂದು ಪಕ್ಕದಲ್ಲಿಯೇ ಇದ್ದ ಕಾಲುವೆಗೆ ಇಳಿದ ವೇಳೆ ಘಟನೆ ನಡೆದಿದೆ.
ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ತಡವಾದರೂ ಮಗ ಕಾಣದಿದ್ದಾಗ ತಂದೆ ಸಾಬಣ್ಣ ಹುಡುಕಾಟ ನಡೆಸಿದ್ದಾನೆ. ಆಗ ಕಾಲುವೆಯಲ್ಲಿ ಮುಳುಗಿರುವ ವಿಷಯ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.