ಅಂಕಣವಿನಯ ವಿಶೇಷ

ಹೀಗೊಂದು ಆಪ್ತ ಬರಹ, ಎಂ.ಬಿ.ಪಾಟೀಲರ ಇನ್ನೊಂದು ಮುಖ’

ಪಾಟೀಲರ ಸಾರ್ವಜನಿಕ‌ ಜೀವನಕ್ಕೆ ಮಮತಾಮಯಿಯೇ ಸಾಥ್.!

ಪಾಟೀಲರ ಸಾರ್ವಜನಿಕ ಜೀವನಕ್ಕಿದೆ ಇವರದೂ ದೊಡ್ಡ ಸಾಥ್.
ಜನಪರ ನಾಯಕ ಡಾ. ಎಮ್. ಬಿ. ಪಾಟೀಲರ ಧರ್ಮಪತ್ನಿ, ಶ್ರೀಮತಿ ಆಶಾ ಪಾಟೀಲರ ಜನುಮ ದಿನ ಇವತ್ತು. ಪಾಟೀಲರದು ಹೊರಗಡೆ ಅಬ್ಬರವಾದರೆ, ತಣ್ಣಗೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಇವರದೇ ಒಂದು ತೂಕ.

ಪತಿ ಒತ್ತಡದಲ್ಲಿರುವುದರಿಂದ ಕ್ಷೇತ್ರದ ಜನರನ್ನು ಆಪ್ತವಾಗಿ ನಿಭಾಯಿಸುವುದರ ಜತೆಗೆ, ನೂರಾರು ಮಹಿಳೆಯರಿಗೆ ಹಾಗೂ ಮಹಿಳಾ ಸಂಘಟನೆಗಳಿಗೆ ಸ್ಪೂರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಪ್ರಚಾರವಿಲ್ಲದೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ತುಂಬ ಸಂಪನ್ನರಾಗಿರುವ ಇವರು ಮಮತಾಮಯಿ. ನೊಂದು ಬರುವವರಿಗೆ ಸಹಾಯವಾಗಿ ನಿಲ್ಲುವುದರ ಜತೆಗೆ, ಪಾಟೀಲರನ್ನು ಆಸ್ಥೆಯಿಂದ ನೋಡಿಕೊಂಡು ಅವರ ‘ಗಡಿಬಿಡಿ’ ಕಡಿಮೆ ಮಾಡುವ ಶಾಂತ ಸ್ವಭಾವದವರು.

ನನಗೆ ಲಿಂಗಾಯತ ಹೋರಾಟದ ಸಂದರ್ಭ ನಮ್ಮ ಪಾಟೀಲರ ಮನೆಯ ಸಂಪರ್ಕ ಬಂದಿದ್ದು. ಪಾಟೀಲ್ ಸರ್ ಒಂದು ದಿ ನನ್ನನ್ನು ತಮ್ಮ ಜತೆಗೇ ಕುಳ್ಳಿರಿಸಿಕೊಂಡು ಬಿಸಿ ರೊಟ್ಟಿ ಉಣ್ಣಿಸಿದ್ದರು. ಆಗ ಈ ಅಮ್ಮ ಉಣಬಡಿಸಿದ್ದರು. ಎಲ್ಲವೂ ಕೇಳಿ ಪರಿಚಯಿಸಿಕೊಂಡಿದ್ದರು. ಅವತ್ತು ಇಡೀ ದಿನ ಪಾಟೀಲರು ತಮ್ಮ ಜತೆಗೆ ವಿಶೇಷ ಅತಿಥಿಯಂತೆ ನನ್ನನ್ನು ತಮ್ಮೊಟ್ಟಿಗೆ ಇಟ್ಟುಕೊಂಡಿದ್ದರು. ಅದು ಯಾವತ್ತೂ ಮರೆಲಾರದ ದಿನ.

ಆಗ ಪಾಟೀಲರ ಇಡೀ ವ್ಯಕ್ತಿತ್ವ, ಅವರ ಸಜ್ಜನ ಕುಟುಂಬ ನನ್ನ ಎದೆಯಲಿ ಇಳಿದು ಹೋಗಿತ್ತು. ಅಲ್ಲಿಯವರೆಗೆ ಹಲವರು ಹೇಳಿದ್ದ ಎಂ.ಬಿ.ಪಾಟೀಲರ ಬಗೆಗಿನ ಹಲವು ಸುಳ್ಳುಗಳು ದೂರವಾಗಿದ್ದವು. ಅವರ ನಿಜ ಗುಣಗಳು ಅರಿವಿಗೆ ಬಂದಿದ್ದವು. ನೋಡಲು ಸಿಟ್ಟಿನ ಸ್ವಭಾವದವರಂತೆ ಕಾಣುವ ಪಾಟೀಲರ ಮನಸ್ಸು, ಹೃದಯ ತುಂಬ ಮೃದು. ಎಲ್ಲವನ್ನು ಭಾಳ ಹಚ್ಚಿಕೊಳ್ಳುವ ಸ್ವಭಾವದವರು ಇವರು.

ತಮಗೆ ನೋವಾಗಿದ್ದರೆ ಯಾವುದೂ ತೋರಿಕೊಳ್ಳದೇ ಒಳಗೇ ಸಂಕಟ ಪಡುವ ಜೀವಿ. ಹಾಗೆಯೇ ಇದು ‘ಹೀಗೆಯೇ ಆಗಬೇಕು’ ಎನ್ನುವ ಅಪರಿಮಿತ ಕಾಯಕ ಜೀವಿ. ಇದೆಲ್ಲಕ್ಕೂ ಜತೆಯಾಗಿ ನಿಂತು ಸಾಕಾರಗೊಳ್ಳಲು ಕಾರಣರಾಗುವವರು ಆಶಾ ತಾಯಿಯವರು. ಪಾಟೀಲರ ಜನ್ಮದಿನದಂದು ಹೋಗಿದ್ದಾಗ ನಮ್ಮ ಪುಟ್ಟ ಮಕ್ಕಳು, ಕುಟುಂಬದ ಜತೆ ಬೆರೆತು, ಸತ್ಕರಿಸಿ ಕಳಿಸಿದ್ದರು.

ಎಲ್ಲ ಇದ್ದರೂ ಯಾವುದನ್ನೂ ತೋರಿಸಿಕೊಳ್ಳದೇ ಮಧ್ಯಮ ವರ್ಗದ ಹೆಣ್ಣುಮಗಳಂತೆ ಸಾದಾಸೀದಾ ಇವರು. ಅದೇ ನಮಗೆಲ್ಲ ಮೆಚ್ಚಿಗೆಯ ಸಂಗತಿ. ಈ ಸಂದರ್ಭ ಎಲ್ಲ ನೆನಪಾಗಿ, ಎಂ.ಬಿ. ಪಾಟೀಲರು ಯಾಕೆ ನನಗೆ ‘ಆಪ್ತರು’ ಮತ್ತು ಇಷ್ಟ ಎನ್ನುವುದಕ್ಕೆ ಮೊದಲ ಬಾರಿಗೆ ಇದೆಲ್ಲ ಹೇಳಿದೆ.

ಶಿವಕುಮಾರ್ ಉಪ್ಪಿನ, ಪತ್ರಕರ್ತ-ಬರಹಗಾರ.
(88809 59555)

Related Articles

Leave a Reply

Your email address will not be published. Required fields are marked *

Back to top button