ಅಪಘಾತಃ ಶ್ರೀಶೈಲ್ ಪಾದಯಾತ್ರಿ ಸಾವು
ಯಾದಗಿರಿ, ಶಹಾಪುರಃ ತಾಲೂಕಿನಿಂದ ಶ್ರೀಶೈಲಕ್ಕೆ ಹೊರಟಿದ್ದ ನೂರಾರು ಪಾದಯಾತ್ರಿಗಳಲ್ಲಿ ನಗರದ ಹಳಿಸಗರ ನಿವಾಸಿ ಮಲ್ಲಿಕಾರ್ಜುನ ತಂದೆ ಬಸಪ್ಪ ಪೂಜಾರಿ (45) ಎಂಬುವರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಇನ್ನಿಬ್ದರು ಗಾಯಗೊಂಡ ಘಟನೆ ರಾಯಚೂರ ಸಮೀಪದಲ್ಲಿ ಬುಧವಾರ ನಡೆದಿದೆ.
ಶಹಾಪುರ ತಾಲೂಕಿನ ದಿಗ್ಗಿ ಗ್ರಾಮದಿಂದ ಹೊರಟಿದ್ದ ಪಾದಯಾತ್ರೆ ಭಕ್ತಾಧಿಗಳ ಸಮೂಹದಲ್ಲಿರುವ ವೊಬ್ಬರು ಅಪಘಾತಕ್ಕೆ ಒಳಗಾಗಿ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.
ಪ್ರತಿ ವರ್ಷ ದಂತೆ ಈ ವರ್ಷವು ಪಾದಯಾತ್ರೆ ಹೋಗಿದ್ದು, ಎಂದಿನ ಯಾತ್ರಾರ್ಥಿಗಳು ಬೆಳಗ್ಗೆ ದಿನಚರಿ ಮುಗಿಸಿಕೊಂಡು ರಸ್ತೆ ಮೂಲಕ ಪಾದಯಾತ್ರೆ ಆರಂಭಿಸಿದಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ದುರ್ಘಟನೆಯಲ್ಲಿ ಹಳಿಸಗರದ ಮಲ್ಲಿಕಾರ್ಜುನ ಮೃತಪಟ್ಟಿದ್ದು, ಇದೇ ತಾಲೂಕಿನ ರೋಜಾ ಗ್ರಾಮದ ಇನ್ನಿಬ್ಬರೂ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಡವರನ್ನು ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಡಿಕ್ಕಿ ಹೊಡೆದ ಲಾರಿ ಪತ್ತೆಯಾಗಿಲ್ಲ. ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾರೆ ಎನ್ನಲಾಗಿದೆ. ರಾಯಚೂರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಮೃತ ಮಲ್ಲಿಕಾರ್ಜುನ ದೇಹ ಸಂಜೆ ಶಹಾಪುರಕ್ಕೆ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಮಲ್ಲಿಕಾರ್ಜುನ ಕುಟುಂಬ ಇತ್ತೀಚೆಗೆ ಹಳಿಸಗರ ಬಿಟ್ಟು ಸಮೀಪದ ಶಖಾಪುರದಲ್ಲಿ ವಾಸವಿದ್ದರು ಎನ್ನಲಾಗಿದೆ.
——————-