ಪ್ರಮುಖ ಸುದ್ದಿ
ಸಂಪುಟದಲ್ಲಿ ಯಾವುದೇ ಹುದ್ದೆ ಆಕಾಂಕ್ಷಿಯಲ್ಲ – ಸಿಟಿ ರವಿ
ಸಂಪುಟದಲ್ಲಿ ಯಾವುದೇ ಹುದ್ದೆ ಆಕಾಂಕ್ಷಿಯಲ್ಲ – ಸಿಟಿ ರವಿ
ಚಿಕ್ಕಮಗಳೂರುಃ ನಾನು ಸಂಪುಟದಲ್ಲಿ ಯಾವುದೇ ಹುದ್ದೆ ಆಕಾಂಕ್ಷಿಯಲ್ಲ. ವರಿಷ್ಠರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಬ್ದಾರಿ ನೀಡಿದ್ದಾರೆ. ನಾನು ಅದರಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಸಿ.ಟಿ.ರವಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾವಾರು ಪ್ರಾತಿನಿಧ್ಯ ಸಿಗುವ ನಿಟ್ಟಿನಲ್ಲಿ ಸಚಿವ ಸಂಪುಟ ರಚನೆಯಾಗಬೇಕು. ಪಕ್ಷ ಸಂಘಟನೆಗೆ ಒತ್ತು ನೀಡುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಸಿಎಂಗೆ ಸಲಹೆ ನೀಡುತ್ತೇನೆ.
ನಮ್ಮ ಜಿಲ್ಲೆಯಲ್ಲಿ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಬೇಕಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಈ ಕುರಿತು ಸಿಎಂ ಅವರ ಜೊತೆ ಚರ್ಚಿಸಿ ಮನವರಿಕೆ ಮಾಡುತ್ತೇನೆ ಎಂದರು.