ಶಹಾಪುರಃ ಬಡ ಕುಟುಂಬಕ್ಕೆ ಆಸರೆಯಾದ ಯುವ ಸಮೂಹ
ಮಾನವೀಯ ಮೌಲ್ಯ ಮೆರೆದ ಶಹಾಪುರ ಯುವಕರು
ಬಡ ಕುಟುಂಬಕ್ಕೆ ಆಸರೆಯಾದ ಯುವ ಸಮೂಹ
ಶಹಾಪುರಃ ನಗರದ ಮಮದಾಪುರ ಕಾಲೋನಿಯ ವಾರ್ಡ್ ಸಂಖ್ಯೆ 20ರ ನಿವಾಸಿ ಸೋಮವ್ವ ಶರಣಪ್ಪ ಹಂಚನಾಳ ಎಂಬ ಮಹಿಳೆ ತನ್ನ ಮಗಳೊಂದಿಗೆ ಮುರಕಲು ಗುಡಿಸಲಿನಲ್ಲ ವಾಸವಿದ್ದಳು. ಕೊರೊನಾ ಹಾವಳಿಯಿಂದಾಗಿ ಕೆಲಸವಿಲ್ಲದೆ ಇನ್ನಷ್ಟು ಕುಗ್ಗಿ ಹೋಗಿದ್ದರು. ಇಂತಹ ಸಮಯದಲ್ಲಿ ನಗರದ ಯುವ ಸಮೂಹ ಈ ವಿಷಯ ತಿಳಿದು ನೆರವಿಗೆ ಧಾವಿಸಿದೆ.
ಆಹಾರ ಧಾನ್ಯಗಳ ಕಿಟ್ ವಿತರಿಸಿ ಅಲ್ಲದೆ ಮನೆಯಿಲ್ಲದೆ ಅತಿ ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಅವರ ಸ್ಥಿತಿ ಕಂಡು ಮಮ್ಮಲು ಮರಗಿದಿ ಇಲ್ಲಿನ ಎಬಿವಿಪಿ ಮುಖಂಡ ಅರವಿಂದ ಉಪ್ಪಿನ್ ಈ ಬಡ ಕುಟುಂಬಕ್ಕೆ ಸಹಾಯ ಹಸ್ತ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯ ಸ್ನೇಹಿತರಿಗೆ ಕರೆ ನೀಡಿದರು.
ತಕ್ಷಣಕ್ಕೆ ಸ್ಪಂಧಿಸಿದ ಗೆಳೆಯರ ಬಳಗ ಈ ಕುಟುಂಬದ ಸ್ಥಿತಿ ನೋಡಿ, ಅವರಿಗೆ ಮನೆ ಕಟ್ಟಿಕೊಡಲು ವಾಗ್ದಾನ ಮಾಡಿದರು. ಅದರಂತೆ ಎಲ್ಲರ ನೆರವಿನೊಂದಿಗೆ ಮಂಗಳವಾರ ಗುಡಿಸಲನ್ನು ತೆರವುಗೊಳಿಸಿ 10/14 ಸೈಜಿನ ನಿವೇಶನದಲ್ಲಿ ಚಿಕ್ಕದಾದ ಚೊಕ್ಕದಾಗಿ ಮನೆ ಕಟ್ಟಿಕೊಡಲು ಇಂದು ಸ್ನೇಹ ಬಳಗ ಅಡಿಪಾಯಕ್ಕೆ ಪೂಜೆ ಸಲ್ಲಿಸಿದರು.
ಕರವೇ ಉಕ ಅಧ್ಯಕ್ಷ ಶರಣು ಬಿ,ಗದ್ದುಗೆ ಅಡಿಪಾಯಕ್ಕೆ ಚಾಲನೆ ನೀಡಿ, ಮಾನವೀಯತೆ ಮೆರೆದ ಯುವ ಸಮೂಹದ ಕೆಲಸಕ್ಕೆ ಸದಾ ಬೆಂಬಲವಿರುದಾಗಿ ಸರ್ವರೂ ಕೈಲಾದ ಸಹಾಯ ಮಾಡಬೇಕು. ದಾನ ಧರ್ಮದಲ್ಲಿ ಭಾಗಿಯವು ಮೂಲಕ ಮನಸ್ಸು ತೃಪ್ತಿ ಕೊಡುತ್ತದೆ. ಅಲ್ಲದೆ ಮುಂದಿನ ಜೀವನಕ್ಕೆ ನಾವು ಭಾಗಿಯಾದ ಇಂತಹ ಪುಣ್ಯದ ಕೆಲಸಗಳೇ ಸಾಥ್ ನೀಡಲಿವೆ ಎಂದರು.
ಅಮ್ಮ ಕ್ಯಾಂಟೀನ್ ಮಾಲೀಕ ಗುರು ಮಣಿಕಂಠ, ಅರವಿಂದ ಉಪ್ಪಿನ್, ವಿಶ್ವನಾಥ ಪಾಲ್ಕಿ, ಸಿದ್ದು ಆನೇಗುಂದಿ, ಪ್ರದೀಪ ಶಿರವಾಳ, ಬಸ್ಸು ಶಿರವಾಳ, ಅವಿನಾಶ ಗುತ್ತೇದಾರ, ಮಲ್ಲಿಕಾರ್ಜುನ ಜಾಕಾ, ಬಸ್ಸು ಯಶ್, ಮಲ್ಲು ಮಮದಾಪುರ ಮತ್ತಿತರರು ಇದ್ದರು.