ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಅಭಿವ್ಯಕ್ತಗೊಳಿಸಲು ಭಾಷಾ ಮೇಳ ಪೂರಕ
ಸಂತಸದ ಕಲಿಕೆಗೆ ಸಂಭ್ರಮದ ಜಾತ್ರೆ
ಶಹಾಪುರಃ ವಿದ್ಯಾರ್ಥಿಗಳಲ್ಲಿನ ಬೌದ್ಧಿಕ ಸಾಮರ್ಥ್ಯ ಅಭಿವ್ಯಕ್ತಿಗೊಳಿಸಲು ಅಕ್ಷರ ಕಲಿಕೆಯ ಭಾóóಷಾ ಮೇಳ ಪೂರಕವಾಗಿದ್ದು, ಇದರಿಂದ ಪ್ರತಿಯೊಂದು ಮಗುವು ಉತ್ತಮ ಶೈಕ್ಷಣಿಕ ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದು ಶಿಕ್ಷಣ ಸಂಯೋಜಕ ರೇವಣಸಿದ್ದಪ್ಪ ತಿಳಿಸಿದರು.
ನಗರದ ಗಾಂಧಿಚೌಕ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಜೀಂ ಪ್ರೇಮಜೀ ಫೌಂಡೇಶನ್ ಇವರ ಸಹಯೋಗದೊಂದಿಗೆ ಕನ್ನಡ, ಇಂಗ್ಲೀಷ ಉರ್ದು ಮತ್ತು ಹಿಂದಿ ವಿಷಯದ ಭಾಷಾ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿನ ಸೂಪ್ತ ಪ್ರತಿಭೆ ಹೊರಹೊಮ್ಮುವುದು ಸೇರಿದಂತೆ ಅವರಲ್ಲಿ ಕಲಿಕೆಯ ಹೊಸ ಬೆಳಕು ಮೂಡಲು ಇಂಥ ಕ್ರಿಯಾತ್ಮಕ ಚಟುವಟಿಕೆಗಳು ಅವಶ್ಯಕವಾಗಿದೆ ಎಂದರು.
ನಾಲ್ಕು ಭಾಷೆಗಳ ಸುಮಾರು 80 ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಉರ್ದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಹಾದೇವಯ್ಯಸ್ವಾಮಿ, ಮಹ್ಮದ ಸಾಧಿಕ ಪಟೇಲ, ಅಜೀಂ ಪ್ರೇಮಜಿ ಫೌಂಡೇಶನ್ ಪ್ರಮುಖರಾದ ದೇವರಾಜ ಕೋಡಬಾಳ, ಜಗದೀಶ ಮತ್ತು ಸಮಸ್ತ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಸಿ.ಆರ್.ಪಿ. ಸಿರಾಜ, ಪ್ರಭಾರಿ ಮುಖ್ಯಗುರು ಮಲಕಪ್ಪ ನಾಸಿ, ಶಿಕ್ಷಕರಾದ ಆಯಿಶಾ ಸಿದ್ದಿಕಾ, ಇಮ್ಮಾನವೆಲ್ ವಿಜಯರಾಜ, ರೂಪಾಲಿ ಜೀನಕೇರಿ, ಹಣಮಂತಪ್ಪ ಬಿರಾದಾರ, ಅಶ್ವಿನಿ ಜೋಶಿ, ರೋಷನ್ ಬಾನು ಸೇರಿದಂತೆ ಸಮಸ್ತ ಶಿಕ್ಷಕ ಸಿಬ್ಬಂದಿಯವರು ಇದ್ದರು.
ಭಾಷಾ ಮೇಳದಲ್ಲಿ ಕಾಗುಣಿತ ಸಂಕೇತ, ಶೀರ್ಷಿಕೆ ರಚನೆ, ಕಥೆ ರಚನೆ ವಾಕ್ಯ ಪ್ರಭೇಧ, ಸಂಧಿಗಳು ಸೇರಿದಂತೆ ಉರ್ದು, ಇಂಗ್ಲೀಷ ಭಾಷೆಯಲ್ಲಿ ಹಲವಾರು ಚಟುವಟಿಕೆ ಗಮನ ಸೆಳೆದವು ವಿವಿಧ ಶಾಲೆಯು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Srujanaatmaka kaarya sir
Howdu sir ..