ಪ್ರಮುಖ ಸುದ್ದಿ
ಭೀಕರ ಅಪಘಾತ ; ಒಂಬತ್ತು ಜನರ ಸಾವು!
ಕುಕ್ಕೆಯಿಂದ ಹಿಂದಿರುಗುವಾಗ ನಡೆದ ಘಟನೆ
ಕಾರವಾರ: ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು 9 ಜನ ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಲಾರಿ ಮತ್ತು ಗ್ಸೈಲೋ ಕಾರಿನ ಮದ್ಯೆ ಡಿಕ್ಕಿ ನಡೆದಿದೆ. ಪರಿಣಾಮ ಕಾರಿನಲ್ಲಿದ್ದ 9ಜನ ಮೃತಪಟ್ಡಿದ್ದಾರೆ. 3 ಮಕ್ಕಳು, 3 ಮಹಿಳೆಯರು ಮತ್ತು 3 ಪುರುಷರು ಸಾವಿಗೀಡಾಗಿದ್ದಾರೆ.
ಇನ್ನೂ ಕೆಲವರು ಗಂಭೀರ ಗಾಯಗೊಂಡಿದ್ದು ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಗ್ಸೈಲೋ ಕಾರಿನಲ್ಲಿದ್ದವರು ಒಂದೇ ಕುಟುಂಬದವರಾಗಿದ್ದು ಕುಕ್ಕೆ ಸುಬ್ರಮಣ್ಯದಿಂದ ರಾಯಭಾಗ್ ಕ್ಕೆ ಹಿಂದಿರುಗುತ್ತಿದ್ದರು. ಈ ವೇಳೆ ಎದುರಾದ ಲಾರಿ ಡಿಕ್ಕಿ ಒಡೆದಿದೆ. ಪರಿಣಾಮ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.