ಕಥೆ

ದೇವರನ್ನು ಎಂದಾದರೂ ಕಂಡಿದ್ದೀರಾ.? ‘ನಂಬಿಕೆ’ ಕಥೆ ಓದಿ

ದಿನಕ್ಕೊಂದು ಕಥೆ

ದಿನಕ್ಕೊಂದು ಕಥೆ

ನಂಬಿಕೆ

ದೇವಾಲಯಕ್ಕೆ ತೆರಳುತ್ತಿದ್ದ ವೃದ್ಧ ಭಕ್ತರೊಬ್ಬರನ್ನು ಪತ್ರಕರ್ತೆ ಒಬ್ಬರು ಪ್ರಶ್ನಿಸಿದರು.
ಪತ್ರಕರ್ತೆ :- ನಿಮ್ಮ ವಯಸ್ಸೆಷ್ಟು..?
ವೃದ್ಧ :- 85 ವರ್ಷ
ಪತ್ರಕರ್ತೆ :- ದೇವಸ್ಥಾನಕ್ಕೆ ಎಷ್ಟು ವರ್ಷದಿಂದ ಹೋಗುತ್ತಿದ್ದೀರ..?
ವೃದ್ಧ :- ಬುದ್ಧಿ ಬಂದಾಗಿನಿಂದಲೂ
ಪತ್ರಕರ್ತೆ :- ಹಾಗಾದರೆ ದೇವರನ್ನು ಕಂಡಿದ್ದೀರಾ..?
ವೃದ್ಧ :- ಇಲ್ಲ
ಪತ್ರಕರ್ತೆ :- ಮತ್ತೆ ದೇವಸ್ಥಾನಕ್ಕೆ ಏಕೆ ಹೋಗುತ್ತಿದ್ದೀರ..?
ವೃದ್ಧ :- ನಿನ್ನನ್ನೊಂದು ಪ್ರಶ್ನೆ ಕೇಳಲೇ..?
ಪತ್ರಕರ್ತೆ :- ಕೇಳಿ.
ವೃದ್ಧ :- ಎಲ್ಲಿಂದ ಬಂದಿರುವೆ..?
ಪತ್ರಕರ್ತೆ :- ಮಹಾನಗರದಿಂದ.
ವೃದ್ಧ :- ಅಲ್ಲಿ ಸಾಕುನಾಯಿಗಳು ಹೆಚ್ಚಾಗಿ ಬೆಳೆಸಿದ್ದಾರಲ್ಲವೇ.. !
ಪತ್ರಕರ್ತೆ :- ಹೌದು, ಮನೆ ಮನೆಗಳಲ್ಲಿಯೂ ಇವೆ.
ವೃದ್ಧ :- ನಮ್ಮ ಹಳ್ಳಿಗಳಲ್ಲಿ ಜಮೀನಿನಲ್ಲಿ ಕಳ್ಳರನ್ನು ಕಾಯಲು ನಾಯಿಗಳನ್ನ ಬೆಳೆಸುತ್ತಾರೆ. ಒಂದು ನಾಯಿ ಕಳ್ಳನನ್ನು ನೋಡಿದಾಗ ಬೊಗಳುವ ಆ ಶಬ್ದ ಕೇಳಿ ಸುತ್ತಮುತ್ತಲಿನ 100 ನಾಯಿಗಳೂ ಬೊಗಳಲು ಪ್ರಾರಂಭಿಸುತ್ತವೆ.

99 ನಾಯಿಗಳು ಕಳ್ಳನನ್ನು ನೋಡಿಯೇ ಇರುವುದಿಲ್ಲ. ಕಳ್ಳನನ್ನು ನೋಡಿ ಮೊದಲು ಕೂಗಿದ್ದು 1 ನಾಯಿ ಆ ನಾಯಿಯ ಶಬ್ದದ

ಮೇಲಿನ ನಂಬಿಕೆಯಿಂದಷ್ಟೇ ಇತರ ನಾಯಿಗಳೂ ಬೊಗಳಿದ್ದು.
ಹಾಗೆಯೇ ನಮ್ಮ ಋಷಿಮುನಿಗಳು, ಆಚಾರ್ಯರು, ಸಂತರು, ಶರಣರು, ತಪಸ್ವಿಗಳು, ದಾಸರು ಮುಂತಾದ ಅನೇಕ ಭಕ್ತರು ಆ ಭಗವಂತನನ್ನು ಕಂಡಿದ್ದಾರೆ. ಅವರ ಮಾತಿನ ನಂಬಿಕೆಯಿಂದಷ್ಟೇ ಬಾಲ್ಯದಿಂದ ಗುಡಿಗೆ ಬರುತ್ತಿದ್ದೇನೆ. ನನಗೂ ಒಮ್ಮೆ ಆ ದೈವದ ದರ್ಶನವಾಗುವುದು ನಿಶ್ಚಿತ.

ನೀತಿ :– ಸಾಮಾನ್ಯವಾದ ನಾಯಿಗೆ ಮತ್ತೊಂದು ನಾಯಿಯ ಮೇಲೆ ವಿಶ್ವಾಸವಿರುವಾಗ, ಯೋಚನಾಶಕ್ತಿಯುಳ್ಳ ಮನುಜನಿಗೆ ಮಹಾತ್ಮರ ಮಾತಲ್ಲಿ ವಿಶ್ವಾಸ ನಂಬಿಕೆ ಇರಬೇಕಲ್ಲವೆ ?

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button