ಪ್ರಮುಖ ಸುದ್ದಿ
ಕೊರೊನಾ ಭಯ ಮರೆತು ನಾಗದೇವತೆಗೆ ಹಾಲೆರೆದ ಮಹಿಳೆಯರು
ಕೊರೊನಾ ಭಯ ಮರೆತು ನಾಗದೇವತೆಗೆ ಹಾಲೆರೆದ ಮಹಿಳೆಯರು
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದಲ್ಲಿ ನಾಗರ ಪಂಚಮಿ ಹಬ್ಬದಂಗವಾಗಿ ಮಹಿಳೆಯರು, ಮಕ್ಕಳು ನಾಗದೇವತೆಗೆ ಹಾಲೆರೆಯುವ ಮೂಲಕ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಿದರು.
ಕೊರೊನಾ ಆತಂಕ ನಡುವೆಯೇ ಮಹಿಳೆಯರು ಮುಖಕ್ಕೆ ಮಾಸ್ಕ್ ಧರಿಸಿ ಆಗಮಿಸಿದರೆ, ಕೆಲವರು ಹಾಗೆ ಆಗಮಿಸಿದ್ದರು ಕಂಡು ಬಂದಿತು.
ಸ್ಥಳೀಯ ನಾಗರ ಕೆರೆ ಬಳಿಯ ನಾಗರ ಕಟ್ಟೆ, ಶೀಲವಂತೇಶ್ವರ ಬೆಟ್ಡದ ನಾಗರ ಕಟ್ಟೆ, ಜಾಲಗಾರ ಮೊಹಲ್ಲಾದ ಲಾಲಸಾಹೇಬ ಮಸೀದಿ ಮುಂದಿನ ನಾಗರಕಟ್ಟೆ ಸೇರಿದಂತೆ ಇತರಡೆ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಹಾಲೆರೆದು ಹಬ್ಬ ಆಚರಣೆ ಮಾಡಿದರು.